ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ಹಲವು ಯೋಜನೆಗಳು ಪರಿಸರಕ್ಕೆ ಹಾನಿಕಾರಕ ಎಂದು ಜನರು ವಿರೋಧ ವ್ಯಕ್ತಪಡಿಸಿದರೂ ಸರ್ಕಾರ (Government) ಅದಕ್ಕೆ ಕಿಂಚಿತ್ತೂ ಕಿಮ್ಮತ್ತು ಕೊಡುತ್ತಿಲ್ಲ. ಅಂತಹದ್ದೇ ಒಂದು ಬೆಂಗಳೂರಿನ (Bengaluru) ಮೇಲ್ಸೇತುವೆ ಯೋಜನೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಪುಟ್ಟ ವಿದ್ಯಾರ್ಥಿಗಳೂ ವಿರೋಧಿಸುತ್ತಾ ಇದ್ದಾರೆ.
Advertisement
ಬ್ರ್ಯಾಂಡ್ ಬೆಂಗಳೂರಿಗೆ (Brand Bengaluru) ಸಹಕರಿಸಲು ಬಿಬಿಎಂಪಿ (BBMP) ಸಾಕಷ್ಟು ಯೋಜನೆಗಳನ್ನ ಹಾಕಿಕೊಂಡಿದೆ. ಆದರೆ ಎಲ್ಲೋ ಒಂದೆಡೆ ಇದು ನಮ್ಮ ಗಾರ್ಡನ್ ಸಿಟಿಯ ಹಸಿರು ಪರಿಸರವನ್ನ ನಾಶಮಾಡಲು ಹೊರಟಿದೆ. ಇದನ್ನೂ ಓದಿ: ಮೆಟ್ರೋ ಮೊಂಡಾಟ- ಅನಾಹುತ ಆಗಿದ್ರೂ ಕಳ್ಳ ಮಾರ್ಗದಲ್ಲಿ ಸೆಟ್ಲ್ಮೆಂಟ್!
Advertisement
Advertisement
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಉದ್ದೇಶಿತ ಸ್ಯಾಂಕಿ ರೋಡ್ ವಿಸ್ತರಣೆ ಹಾಗೂ ಮೇಲ್ಸೇತುವೆ ನಿರ್ಮಾಣ ಮಾಡಲು ಬಿಬಿಎಂಪಿ ಹೊರಟಿದೆ. ಇದಕ್ಕೆಂದು ಸರಿ ಸುಮಾರು 50-60 ಮರಗಳ ಮಾರಣವಾಗುತ್ತದೆ ಎನ್ನಲಾಗ್ತಿದೆ. ಮರಗಳನ್ನು ಕಡಿಯೋದ್ರಿಂದ ಕೆರೆ ದಂಡೆಗೆ ಸಮಸ್ಯೆಯಾಗಿ ಮಣ್ಣು ಸಡಿಲಗೊಳ್ಳುತ್ತೆ. ಟ್ರಾಫಿಕ್ ಸಮಸ್ಯೆಗೆ ಫ್ಲೈಓವರ್ ನಿರ್ಮಾಣ ಪರಿಹಾರ ಅಲ್ಲ. ನಾವು ಹೋರಾಟ ತೀವ್ರಗೊಳಿಸ್ತೇವೆ. ಈಗಾಗಲೇ ಜನಾಭಿಪ್ರಾಯ ಸಂಗ್ರಹಿಸುತಿದ್ದೇವೆ ಅಂತಾ ಸೇವ್ ಬೆಂಗಳೂರು ಸಮಿತಿ ಜ್ಞಾನ ಮೂರ್ತಿ ಹೇಳಿದ್ದಾರೆ.
Advertisement
ಇನ್ನೂ ಈ ಯೋಜನೆ ಪರಿಸರಕ್ಕೆ ಮಾರಕ ಎಂದು ಸ್ಯಾಂಕಿ ಕೆರೆ ಉಳಿವಿಗಾಗಿ ಪರಿಸರವಾದಿಗಳು, ಸ್ಥಳೀಯರು ಜೊತೆಗೆ ಈಗ ಶಾಲಾ ಮಕ್ಕಳು ಪಣ ತೊಟ್ಟಿದ್ದಾರೆ. ನಗರದ ಸುಮಾರು 2 ಸಾವಿರಕ್ಕೂ ಹೆಚ್ಚು ಮಕ್ಕಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಉದ್ದೇಶಿತ ಸ್ಯಾಂಕಿ ರೋಡ್ ಮೇಲ್ಸೇತುವೆ ನಿಲ್ಲಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಗುಂಡಿನ ದಾಳಿ – 7 ಮಂದಿ ಸಾವು
`ಆತ್ಮೀಯ ಬೊಮ್ಮಾಯಿ ಅಂಕಲ್, ದಯವಿಟ್ಟು ನಮ್ಮ ಪರಿಸರವನ್ನು ರಕ್ಷಿಸಿ. ನಾವು ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಕಲಿಯಲು ಮತ್ತು ಒಟ್ಟಿಗೆ ಆಡಲು ಬಯಸುತ್ತೇವೆ’ ಎಂದು ಬರೆದು ಮನವಿ ಮಾಡಿದ್ದಾರೆ. ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ. ನಗರದಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಸರ್ಕಾರ ಈ ಯೋಜನೆಗಾಗಿ ಟೆಂಡರ್ ಕರೆದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k