ಚೆನ್ನೈ: ನೀಟ್ ಪರೀಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ತಮಿಳುನಾಡು ಮೂಲದ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ಶುಕ್ರವಾರ ನಡೆದಿದೆ. 17 ವರ್ಷದ ಎಸ್ ಅನಿತ ಮೃತ ದುರ್ದೈವಿ. ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿಲ್ಲವೆಂದು ಅನಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಚೆನ್ನೈನ ಅರಿಯಲುರು ಜಿಲ್ಲೆಯ ಗ್ರಾಮವೊಂದರ ದಿನಗೂಲಿ ಕಾರ್ಮಿಕರ ಮಗಳಾಗಿರೋ ಅನಿತ ಬೋರ್ಡ್ ಎಕ್ಸಾಂ ನಲ್ಲಿ 1,200 ಅಂಕಗಳಿಗೆ 1,176 ಅಂಕಗಳನ್ನು ಗಳಿಸಿದ್ದರು. ಆಕೆ ವೈದ್ಯೆಯಾಗಬೇಕೆಂಬ ಕನಸು ಹೊತ್ತಿದ್ದರು. ಆದ್ರೆ ನೀಟ್‍ಪರೀಕ್ಷೆ ಚೆನ್ನಾಗಿ ಬರೆದಿರಲಿಲ್ಲ. ಹೀಗಾಗಿ ಪ್ರವೇಶಾತಿ ಸಿಕ್ಕಿರಲಿಲ್ಲ. ಅನಿತ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೋಷಕರು ಹೇಳಿದ್ದಾರೆ.
Advertisement
ವಿದ್ಯಾರ್ಥಿನಿ ಆತ್ಮಹತ್ಯೆಗೆ ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಕಮಲ್ ಹಾಸನ್ ಟ್ವಿಟ್ಟರ್‍ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
Advertisement
ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ನೀಟ್ ಪರೀಕ್ಷೆ ನಡೆಸಿ ಪ್ರವೇಶಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಆದೇಶಿಸಿತ್ತು. ತಮಿಳುನಾಡಿನಲ್ಲಿ ಸುಮಾರು 10 ಮೆಡಿಕಲ್ ಕಾಲೇಜುಗಳಿದ್ದು, ನೀಟ್ ಪರೀಕ್ಷೆ ಸಿಬಿಎಸ್‍ಸಿ ವಿದ್ಯಾರ್ಥಿಗಳಿಗೆ ಸುಲಭವಾಗುತ್ತೆ. ಆದ್ರೆ ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಖಾಸಗಿ ಟ್ಯೂಷನ್‍ಗಳಿಗೆ ಹೋಗುವಷ್ಟು ಅನುಕೂಲವಿರುವುದಿಲ್ಲ. ಹೀಗಾಗಿ ಅಂತಹ ವಿದ್ಯಾರ್ಥಿಗಳಿಗೆ ಇದರಿಂದ ಕಷ್ಟವಾಗುತ್ತದೆ ಎಂದು ತಮಿಳುನಾಡು ಹೇಳಿತ್ತು.
Advertisement
ಈ ಹಿನ್ನೆಲೆಯಲ್ಲಿ ಕಳೆದ ವರ್ಷ ತಮಿಳುನಾಡಿಗೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಆದ್ರೆ ಅದನ್ನು ಈ ವರ್ಷವೂ ಮುಂದುವರಿಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗಾಗಿ ತಮಿಳುನಾಡು ಕಡ್ಡಾಯವಾಗಿ ನೀಟ್ ಪರೀಕ್ಷೆ ನಡೆಸಬೇಕು ಎಂದು ಕಳೆದ ವಾರ ಕೋರ್ಟ್ ಹೇಳಿತ್ತು.
ನೀಟ್ ಪರೀಕ್ಷೆಯಿಂದ ವೈದ್ಯರಾಗಲು ಅರ್ಹತೆಯುಳ್ಳ ಅತ್ಯುತ್ತಮ ಅಭ್ಯರ್ಥಿಗಳನ್ನ ಗುರುತಿಸಲು ಸಹಾಯವಾಗುತ್ತದೆ ಅನ್ನೋದು ನೀಟ್ ಪರ ಹೋರಾಟಗಾರರ ವಾದ.
Chennai, Tamil Nadu: Naam Tamilar Katchi members pay tributes to #Anitha and stage protest over her death, demand scrapping of NEET. pic.twitter.com/uHweqxZbPz
— ANI (@ANI) September 2, 2017
#Anitha managed to study in difficult circumstances. She was concerned about NEET. What wrong had she done,who will answer?: Anitha's father pic.twitter.com/7oibWB86Ie
— ANI (@ANI) September 2, 2017
#TamilNadu CM announces ex-gratia of Rs. 7 lakh for #Anitha (fought against NEET in SC), a Dalit student who allegedly committed suicide.
— ANI (@ANI) September 1, 2017