ಲಕ್ನೋ: ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲನೇ (Principal) 17 ವರ್ಷದ ವಿದ್ಯಾರ್ಥಿನಿಗೆ (Student) ಮಾದಕ ವಸ್ತು ನೀಡಿ ಅತ್ಯಾಚಾರ (Rape) ಎಸಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮೀರತ್ನಲ್ಲಿ (Meerut) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ನವೆಂಬರ್ 23ರಂದು ಪ್ರಾಂಶುಪಾಲ ಶಾಲೆಯ ಒಟ್ಟು 9 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ. ಅಂದು ರಾತ್ರಿ ವೇಳೆ ತಂಗಲು 2 ಹೋಟೆಲ್ ಕೊಠಡಿಗಳನ್ನು ತೆಗೆದುಕೊಂಡಿದ್ದು, ಒಂದು ಕೊಠಡಿಯಲ್ಲಿ 8 ವಿದ್ಯಾರ್ಥಿಗಳನ್ನಿರಿಸಿದ್ದ. ಇನ್ನೊಂದು ಕೊಠಡಿಯಲ್ಲಿ ಪ್ರಾಂಶುಪಾಲ 11ನೇ ತರಗತಿಯ ವಿದ್ಯಾರ್ಥಿನಿಯೊಂದಿಗೆ ಉಳಿದುಕೊಂಡಿದ್ದ ಎನ್ನಲಾಗಿದೆ.
Advertisement
Advertisement
ಪ್ರಾಂಶುಪಾಲ ವಿದ್ಯಾರ್ಥಿನಿಗೆ ಆಹಾರದಲ್ಲಿ ಮಾದಕ ವಸ್ತುವನ್ನು ಬೆರೆಸಿದ್ದು, ಬಳಿಕ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ, ಪ್ರಾಂಶುಪಾಲ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಹಾಗೂ ಕೊಲೆಯ ಬೆದರಿಕೆ ಹಾಕಿದ್ದಾನೆ ಎಂದು ಹಸ್ತಿನಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 13ರ ಮಗಳ ಮೇಲೆ ಪದೇ ಪದೇ ಅತ್ಯಾಚಾರ – ತಂದೆಗೆ ಜೀವಾವಧಿ ಶಿಕ್ಷೆ
Advertisement
ವಿದ್ಯಾರ್ಥಿನಿ ನವೆಂಬರ್ 24ರಂದು ತನ್ನ ಮನೆಗೆ ಮರಳಿದ್ದು, ಆರಂಭದಲ್ಲಿ ಆಕೆ ಮೌನವಾಗಿದ್ದಳು. ಬಳಿಕ ನಡೆದ ಎಲ್ಲಾ ವಿಷಯವನ್ನು ಕುಟುಂಬದವರಿಗೆ ತಿಳಿಸಿದ್ದಾಳೆ.
Advertisement
ಬಾಲಕಿಯ ತಂದೆ ನೀಡಿರುವ ದೂರಿನ ಮೇರೆಗೆ ಪೊಲೀಸರು ಶನಿವಾರ ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ತಲೆಮರೆಸಿಕೊಂಡಿರುವ ಪ್ರಾಂಶುಪಾಲನ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಯುವತಿಯರ ಜೊತೆ ನಡುರಾತ್ರಿ ತಿರುಗಾಡುತ್ತಿದ್ದ ಮುಸ್ಲಿಂ ಯುವಕರ ಮೇಲೆ ಹಲ್ಲೆಗೆ ಯತ್ನ