ಹೈದರಾಬಾದ್: ತಂದೆಯ ಸಾಲ ತೀರಿಸಲು ತನ್ನ ಮೂತ್ರಪಿಂಡ (Kidney) ಮಾರಲು ಯತ್ನಿಸಿದ್ದ ವಿದ್ಯಾರ್ಥಿನಿ (Student) ಸೈಬರ್ ವಂಚಕರ (Cyber Crooks) ಜಾಲಕ್ಕೆ ಸಿಕ್ಕಿ 16 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್‌ನ ಗುಂಟೂರಿನ ನರ್ಸಿಂಗ್ ವಿದ್ಯಾರ್ಥಿನಿ (Nursing Student) ತನ್ನ ತಂದೆ ಮಾಡಿದ್ದ 2 ಲಕ್ಷ ರೂಪಾಯಿ ಸಾಲ ತೀರಿಸಲು ತನ್ನ ಮೂತ್ರಪಿಂಡ ಮಾರಾಟ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ಸೈಬರ್ ವಂಚಕರಿಗೆ ಸಿಕ್ಕಿ ತನ್ನ ಬ್ಯಾಂಕ್ ಖಾತೆಯಿಂದ 16 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಈ ಸಂಬಂಧ ಗುಂಟೂರು ಪೊಲೀಸರಿಗೆ (Guntur Police) ದೂರು ನೀಡಿದ್ದಾಳೆ. ಇದನ್ನೂ ಓದಿ: ಗಡಿ ವಿವಾದದ ನಡುವೆಯೂ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಭೇಟಿ
Advertisement
Advertisement
ಆಕೆ ಕಿಡ್ನಿ ಮಾರಲು ಯತ್ನಿಸಿದಾಗ ವಂಚಕರು 3 ಕೋಟಿ ಆಫರ್ ನೀಡಿದ್ದಾರೆ. ಅದಕ್ಕೂ ಮುನ್ನ ಪೊಲೀಸ್ ವೆರಿಫಿಕೇಶನ್ ಹಾಗೂ ತೆರಿಗೆ ಹಣವಾಗಿ 16 ಲಕ್ಷ ರೂಪಾಯಿ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಪ್ರವೀಣ್ ರಾಜ್ ಎಂಬವನನ್ನ ಭೇಟಿಯಾಗಿದ್ದು, ಆತ ಶೇ.50 ರಷ್ಟು ಹಣವನ್ನು ಆಪರೇಷನ್‌ಗೆ ಮುಂಚಿತವಾಗಿ, ಉಳಿದ ಹಣವನ್ನು ಕೆಲಸ ಮುಗಿದ ನಂತರ ಕೊಡುವುದಾಗಿ ಹೇಳಿದ್ದಾನೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ
Advertisement
ಹಣ ವರ್ಗಾವಣೆ ಮಾಡುವುದಕ್ಕಾಗಿ ಚೆನ್ನೈ ಸಿಟಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾಳೆ. ಈ ಖಾತೆ ಮೂಲಕ 16 ಲಕ್ಷ ಪಾವತಿಸಿದ ಬಳಿಕ ಹಣ ಕೇಳಿದ್ದಾಳೆ. ನಂತರ ಹಣ ವಸೂಲಿ ಮಾಡಲು ದೆಹಲಿಗೆ ಹೋಗುವಂತೆ ಹೇಳಿದ್ದಾರೆ. ಆಕೆ ದೆಹಲಿಗೆ ತೆರಳಿದಾಗ ವಿಳಾಸ ಸಹ ನಕಲಿಯಾಗಿರುವುದು ಕಂಡುಬಂದಿದೆ.
Advertisement
ಸಂತ್ರಸ್ತೆಯ ತಂದೆ ತನ್ನ ಎಟಿಎಂ ಕಾರ್ಡ್‌ಗಳಲ್ಲಿ ಒಂದನ್ನು ಮಗಳಿಗೆ ನೀಡಿದ್ದರು. ನವೆಂಬರ್‌ನಲ್ಲಿ ಖಾತೆಯಿಂದ ಹಣ ತೆಗೆದುಕೊಂಡಿರುವ ಬಗ್ಗೆ ಅವರಿಗೆ ಗೊತ್ತಾಯಿತು. ನಂತರ ಮಗಳನ್ನು ಮನೆಗೆ ಬರುವಂತೆ ಹೇಳಿದಾಗ, ಆಕೆ ಹಾಸ್ಟೆಲ್ ಬಿಟ್ಟು ಹೋಗಿದ್ದಳು. ಬಳಿಕ ಹುಡುಕಾಟ ನಡೆಸಿದ್ದ ಎನ್‌ಟಿಆರ್ ಜಿಲ್ಲೆಯ ಪೊಲೀಸರು ಜಗ್ಗಯ್ಯಪೇಟಾದಲ್ಲಿ ಆಕೆಯ ಸ್ನೇಹಿತನ ಮನೆಯಲ್ಲಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ.