CrimeLatestMain PostNational

ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಿಂದ ಬಿದ್ದು ವಿದ್ಯಾರ್ಥಿ ಸಾವು

ಚೆನ್ನೈ: ವಿದ್ಯಾರ್ಥಿಯೊಬ್ಬ ಚಲಿಸುತ್ತಿದ್ದ ರೈಲಿನ ಫುಟ್‌ಬೋರ್ಡ್‌ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ತಿರುವಲಂಗಾಡು ಮೂಲದ ನೀತಿ ದೇವನ್ (19) ಮೃತ ವಿದ್ಯಾರ್ಥಿ. ನೀತಿ ದೇವನ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಎ (ಅರ್ಥಶಾಸ್ತ್ರ) ವಿದ್ಯಾರ್ಥಿಯಾಗಿದ್ದ. ಈತ ರೈಲಿನ ಫುಟ್‍ಬೋರ್ಡ್ ಮೇಲೆ ನಿಂತಿದ್ದಾಗ ಜಾರಿ ಬಿದ್ದಿದ್ದಾನೆ. ತಕ್ಷಣ ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

train

ಅಪಘಾತದ ಬಗ್ಗೆ ದಕ್ಷಿಣ ರೈಲ್ವೆ ವಿಷಾದ ವ್ಯಕ್ತಪಡಿಸಿದೆ. ಈ ಘಟನೆ ಮತ್ತೆ ನಡೆಯದಂತೆ ಮತ್ತು ರೈಲಿನಲ್ಲಿ ಸಾಹಸ ಪ್ರದರ್ಶನವನ್ನು ತಪ್ಪಿಸುವಂತೆ ವಿಭಾಗೀಯ ವ್ಯವಸ್ಥಾಪಕರು ಪ್ರಯಾಣಿಕರಿಗೆ ಸಲಹೆ ನೀಡಿದರು. ಇದನ್ನೂ ಓದಿ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ನಗರಸಭೆ ಸದಸ್ಯೆ ಪತಿ

ನೀತಿ ದೇವನ್ ತನ್ನ ಸ್ನೇಹಿತರೊಂದಿಗೆ ಈ ರೀತಿಯ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಹರಿದಾಡುತ್ತಿದೆ. ವೀಡಿಯೋದಲ್ಲಿ ಚಲಿಸುತ್ತಿರುವ ರೈಲುಗಳ ಕಿಟಕಿಯ ಮೇಲೆ ಕಾಲೇಜು ವಿದ್ಯಾರ್ಥಿಗಳು ನೇತಾಡುತ್ತಿದ್ದಾರೆ. ಇದನ್ನೂ ಓದಿ: ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ

Leave a Reply

Your email address will not be published.

Back to top button