ಮಂಗ್ಳೂರಿನಲ್ಲಿ ರೈಲಿನಡಿ ತಲೆ ಕೊಟ್ಟು ಬೆಳಗಾವಿಯ BE ವಿದ್ಯಾರ್ಥಿ ಆತ್ಮಹತ್ಯೆ

Public TV
1 Min Read
MNG SUICIDE

ಮಂಗಳೂರು: ಬೆಳಗಾವಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮಂಗಳೂರಿಗೆ ಬಂದು ರೈಲಿನಡಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ನಡೆದಿದೆ.

ಬೆಳಗಾವಿ ನಿವಾಸಿ ಸಮ್ಮದ್ ರಾಯಗೌಡ (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ರಾಯಗೌಡ ಬಿ.ಇ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು. ರಾಯಗೌಡ ಮಂಗಳೂರಿನ ಉಳ್ಳಾಲ ಸೋಮೇಶ್ವರ ರೈಲ್ವೇ ನಿಲ್ದಾಣದಲ್ಲಿ ರೈಲು ಬರುವ ಮೊದಲೇ ಬಂದು ಕೂತಿದ್ದನು. ನಂತರ ರೈಲು ಬರುತ್ತಿದ್ದಂತೆ ಹಳಿಗೆ ಹಾರಿ ರೈಲಿನಡಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

police 4

ಮಾಹಿತಿ ತಿಳಿದು ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಆಗಮಿಸಿದ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

Share This Article