ಚಿಕ್ಕಮಗಳೂರು: ಆನ್‍ಲೈನ್ (Online) ಎಡವಟ್ಟಿನಿಂದಾಗಿ ಟಿಇಟಿ ಪರೀಕ್ಷೆಯ (Teacher Eligibility Test) ಅಭ್ಯರ್ಥಿ ಪರೀಕ್ಷೆ (Exam) ಬರೆಯದೇ ವಂಚಿತರಾದ ಘಟನೆ ನಗರದ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಇಂದು ನಗರದ ವಿವಿಧ ಕಾಲೇಜುಗಳಲ್ಲಿ ಟಿಇಟಿ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಗೆಂದು ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದರು. ಆದರೆ, ಆನ್‍ಲೈನ್ ಎಡವಟ್ಟಿನಿಂದ ಬಳ್ಳಾರಿ (Ballary) ಮೂಲದ ಅಭ್ಯರ್ಥಿಯೋರ್ವ (Student) ಪರೀಕ್ಷೆ ಬರೆಯಲಾಗದೇ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಆನ್‍ಲೈನ್‍ನಲ್ಲಿ ಹಾಲ್ ಟಿಕೆಟ್ ತೆಗೆದುಕೊಂಡ ಅಭ್ಯರ್ಥಿಗೆ ಆರಂಭದಲ್ಲಿ ಒಂದು ಕಾಲೇಜು ತೋರಿಸಿದೆ. ಅಲ್ಲಿಗೆ ಹೋದರೆ ಅಲ್ಲಿ ಆತನ ರಿಜಿಸ್ಟರ್ ನಂಬರ್ ಇಲ್ಲ. ಮತ್ತೊಮ್ಮೆ ಹಾಲ್ ಟಿಕೆಟ್ ನೋಡಿದರೆ ಆಗ ಮತ್ತೆ ಬೇರೆ ಕಾಲೇಜು ತೋರಿಸಿದೆ. ಜೊತೆಗೆ ಆತನಿಗೆ ಹಾಲ್ ಟಿಕೆಟ್ ಪ್ರಿಂಟ್ ಔಟ್ ತೆಗೆಸಲು ಸಾಧ್ಯವಾಗಿಲ್ಲ. ಭಾನುವಾರವಾದ ಕಾರಣ ಕಂಪ್ಯೂಟರ್ ಸೆಂಟರ್‌ಗಳು ಬಾಗಿಲು ಹಾಕಿದ್ದರಿಂದ ಪ್ರಿಂಟ್ ಔಟ್ ತೆಗೆಯಲು ಆಗಿಲ್ಲ. ಇದರಿಂದಾಗಿ ಆತ ಎರಡನೇ ಕಾಲೇಜಿನ ಬಳಿಯೂ ಬಂದರೂ ಕೊಠಡಿ ಮೇಲ್ವಿಚಾರಕರು ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಇದರಿಂದ ಬಳ್ಳಾರಿಯಿಂದ ಬಂದು ಪರೀಕ್ಷೆ ಬರೆಯಲು ಸಾಧ್ಯವಾಗದ ಕಾರಣ ವಿದ್ಯಾರ್ಥಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬರೀ ಒಂದು ಕಾಲಲ್ಲ, ಆತನ ಮೈಯೆಲ್ಲ ಕೊಳೆತು ಹೋಗಬೇಕು – ಆ್ಯಸಿಡ್ ಸಂತ್ರಸ್ತೆ
Advertisement
Advertisement
ಅಧಿಕಾರಿಗಳ ಎಡವಟ್ಟಿನಿಂದ ನಾನು ಪರೀಕ್ಷೆ ಬರೆಯಲು ಆಗಿಲ್ಲ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಸರ್ಕಾರ ಒಂದೇ ರೀತಿಯ ಹಾಲ್ ಟಿಕೆಟ್ ನೀಡಬೇಕು. ಹೀಗೆ ಎರಡೆರಡು ರೀತಿಯ ಹಾಲ್ ಟಿಕೆಟ್ ನೀಡಿದರೆ ದೂರದಿಂದ ಬಂದ ಅಭ್ಯರ್ಥಿಗಳ ಕಥೆ ಏನು. ನಮಗೆ ಊರು ಕೂಡ ಪರಿಚಯ ಇರುವುದಿಲ್ಲ. ಅಲ್ಲಿ-ಇಲ್ಲಿ ಕೇಳಿಕೊಂಡು ಬಂದಿರುತ್ತೇವೆ. ಸರ್ಕಾರದ ಎಡವಟ್ಟಿನಿಂದ ಈಗ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದಕ್ಕೆ ಹೊಣೆ ಯಾರು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ