– ಸಹಾಯ ಮಾಡಿ ಬೆಸ್ಟ್ ಆಫ್ ಲಕ್ ಎಂದ ಪೇದೆ
– ಇಲಾಖೆಯಿಂದಲೂ ಪ್ರಶಂಸೆ
ಮುಂಬೈ: ಟ್ರಾಫಿಕ್ ಪೊಲೀಸರೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿನಿ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಸಹಾಯ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಘಟನೆ ಮುಂಬೈನಲ್ಲಿ ನಡೆದಿದ್ದು, ವಿದ್ಯಾರ್ಥಿನಿ ಎಸ್‍ಎಸ್‍ಸಿ ಬೋರ್ಡ್ ಪರೀಕ್ಷೆಗೆ ತೆರಳಲು ಖಾರ್ ಆಟೋ ನಿಲ್ದಾಣದಲ್ಲಿ ಸರತಿಯಲ್ಲಿ ನಿಂತಿದ್ದಳು. ಆಗ ವಿದ್ಯಾರ್ಥಿನಿಯ ದುಗುಡ ಕಂಡ ಟ್ರಾಫಿಕ್ ಪೊಲೀಸ್ ಪೇದೆ, ಪರೀಕ್ಷೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಅವಳಿಗೆ ಎಸ್‍ಎಸ್‍ಸಿ ಬೋರ್ಡ್ ಪರೀಕ್ಷೆ ಇರುವುದು ತಿಳಿದಿದೆ. ಆಗ ವಿದ್ಯಾರ್ಥಿನಿಯನ್ನು ಸರತಿಯಿಂದ ಹೊರಗೆ ಬರುವಂತೆ ಸೂಚಿಸಿದ್ದಾರೆ. ನಂತರ ಹೋಗುತ್ತಿದ್ದ ಆಟೋ ರಿಕ್ಷಾ ನಿಲ್ಲಿಸಿ ವಿದ್ಯಾರ್ಥಿನಿಯನ್ನು ಹತ್ತಿಸಿದ್ದಾರೆ. ಈ ಮೂಲಕ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಸಹಾಯ ಮಾಡಿದ್ದಾರೆ. ಅಲ್ಲದೆ ವಿದ್ಯಾರ್ಥಿನಿ ಪರೀಕ್ಷೆಗೆ ಗುಡ್ ಲಕ್ ಎಂದು ವಿಶ್ ಮಾಡಿ ಕಳುಹಿಸಿದ್ದಾರೆ.
Advertisement
A @MumbaiPolice traffic cop noticed this and asked the student if she had exams today, the student promptly nodded. He asked her to step out of the line, stopped a rickshaw for her and sent her away with a “Good luck for your exams!” saving her valuable time.
— Rahull Raut (@MisterRatty) March 3, 2020
Advertisement
ಮಿಸ್ಟರ್ ರ್ಯಾಟ್ಟಿ ಎಂಬ ಟ್ವಿಟ್ಟರ್ ಬಳಕೆದಾರರು ಈ ಘಟನೆಗೆ ಸಾಕ್ಷಿಯಾಗಿದ್ದು, ಈ ಕುರಿತು ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪರೀಕ್ಷೆಗೆ ತೆರಳಲು ವಿದ್ಯಾರ್ಥಿನಿ ಖಾರ್ ಆಟೋ ಸ್ಟೇಷನ್ ಬಳಿ ಸಾಲಿನಲ್ಲಿ ನಿಂತಿದ್ದಳು. ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಪರೀಕ್ಷೆ ಇದೆಯೇ ಎಂದು ಕೇಳಿ, ನಂತರ ಬೇರೆ ಆಟೋದಲ್ಲಿ ಆಕೆಯನ್ನು ಪರೀಕ್ಷೆಗೆ ಕಳುಹಿಸಿದರು. ಅಲ್ಲದೆ ಬೆಸ್ಟ್ ಆಫ್ ಲಕ್ ಎಂದು ಹಾರೈಸಿದರು ಎಂದು ಬರೆದುಕೊಂಡಿದ್ದಾರೆ.
Advertisement
ಈ ಘಟನೆ ಕುರಿತು ಮುಂಬೈ ಪೊಲೀಸ್ ಇಲಾಖೆ ಸಹ ಟ್ವೀಟ್ ಮಾಡಿದ್ದು, ಎಸ್‍ಎಸ್‍ಸಿ ಪರೀಕ್ಷೆಯ ಮೊದಲ ದಿನ ಹಲವು ಸವಾಲುಗಳಿರುತ್ತವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಸಹಾಯ ಮಾಡಲು ಸಾಧ್ಯವಾಗಿದ್ದಕ್ಕೆ ಸಂತಸವಾಗುತ್ತಿದೆ. ಇಂದಿನಿಂದ ಎಸ್‍ಎಸ್‍ಸಿ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ಎಂದು ಪೊಲೀಸ್ ಇಲಾಖೆ ಶುಭ ಹಾರೈಸಿದೆ.
Advertisement
First day of exam has its own share of challenges. We are happy to have been able to help a student in overcoming at least one of them!
Mumbai Police sends best wishes to all the students appearing for SSC Board Exams starting today. #AllTheBest #sscexams @MisterRatty pic.twitter.com/vBut2QVOkk
— मुंबई पोलीस – Mumbai Police (@MumbaiPolice) March 3, 2020
ಪೊಲೀಸ್ ಪೇದೆಯ ಈ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಮುಂಬೈ ಪೊಲೀಸರಿಂದ ಇಂತಹ ಕೆಲಸಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಇಂತಹ ಅಪರೂಪದ ಘಟನೆಗೆ ಪಾತ್ರರಾದ ಮುಂಬೈ ಪೊಲೀಸರಿಗೆ ಧನ್ಯವಾದ. ಅಗತ್ಯವಿರುವಾಗ ಯಾವಾಗಲೂ ಈ ರೀತಿಯ ಸಹಾಯ ಮಾಡಿ ಎಂದು ಪ್ರತಿಕ್ರಿಯಿಸಿದ್ದಾರೆ.