ಭೋಪಾಲ್: 11 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಾಲ್ಕು ಕಾರುಗಳಲ್ಲಿ ಅತ್ಯಾಚಾರ ಎಸಗಿ, ಹಣ ಸುಲಿಗೆ ಮಾಡಿ ಇಸ್ಲಾಂಗೆ ಮತಾಂತರಗೊಳ್ಳಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಶಹಪುರ ಪ್ರದೇಶದ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿರುವ ಬಾಲಕಿ, ಸ್ನೇಹಿತನ ಮೂಲಕ ಔಸಾಫ್ ಅಲಿ ಖಾನ್ ಎಂಬ ವ್ಯಕ್ತಿಯೊಂದಿಗೆ ಪರಿಚಯವಾದಳು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಸ್ನೇಹ ಬೆಳೆದಂತೆ, ಔಸಾಫ್ ಆಕೆಯನ್ನು ತನ್ನೊಂದಿಗೆ ಡ್ರೈವ್‌ಗೆ ಕರೆದುಕೊಂಡು ಹೋಗುತ್ತೇನೆಂದು ಖಾನುಗಾಂವ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಕಾರಿನೊಳಗೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಮುಂಬೈನಲ್ಲಿ ತನ್ನ ಲವ್ವರ್‌ನ ಟೀನೇಜ್ ಗರ್ಲ್‌ಫ್ರೆಂಡ್ ಮುಖಕ್ಕೆ ಗುಂಡು ಹಾರಿಸಿ ಕೊಂದ ಯುವತಿ
ಜಿಮ್ ಮಾಲೀಕನಾಗಿರುವ ಔಸಾಫ್‌ನ ಸ್ನೇಹಿತ ಮಾಜ್ ಖಾನ್ ಕೃತ್ಯದ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ. ಇಬ್ಬರೂ ಸೇರಿಕೊಂಡು ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ವೀಡಿಯೊವನ್ನು ಬಳಸಿಕೊಂಡರು. ಆಕೆ ಅವರಿಗೆ 1 ಲಕ್ಷ ರೂ. ನೀಡದಿದ್ದರೆ ವೀಡಿಯೊ ವೈರಲ್ ಮಾಡುವುದಾಗಿ ಹೆದರಿಸಿದ್ದರು. ಆಘಾತಕ್ಕೊಳಗಾದ ಅಪ್ರಾಪ್ತೆ ಹೇಗೋ ಅವರಿಗೆ 40,000 ರೂ. ನೀಡಿದ್ದಾಳೆ. ಆದರೆ, ಆರೋಪಿಗಳು ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಮಾಡುವುದನ್ನು ಮುಂದುವರೆಸಿದ್ದರು.
ಎರಡು ಸೆಡಾನ್ ಮತ್ತು ಒಂದು ಮಹೀಂದ್ರಾ ಥಾರ್ ಸೇರಿದಂತೆ ನಾಲ್ಕು ಕಾರುಗಳಲ್ಲಿ ಬಂದ ಆ ಆರೋಪಿಗಳು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ. ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫೇರ್‌ವೆಲ್ ಪಾರ್ಟಿ ಮುಗಿಸಿ ವಾಪಸ್ ಆಗ್ತಿದ್ದ ವಿದ್ಯಾರ್ಥಿ ಕಾರು ಡಿಕ್ಕಿ; 6 ವರ್ಷದ ಬಾಲಕ ಸಾವು
ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ಎಸ್‌ಐಟಿ, ಆರೋಪಿಗಳು ಬೇರೆ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಿದೆ.

