ಗಾಂಧಿನಗರ: ವಿದ್ಯಾರ್ಥಿಯೋರ್ವ ಪ್ರಾಂಶುಪಾಲರ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿರುವ ಘಟನೆ ಗುಜರಾತಿನ ಜಾಮನಗರದ ವಿಎಂ ಮಹ್ತಾ ಕಾಲೇಜಿನಲ್ಲಿ ನಡೆದಿದೆ.
ಸೌರಾಷ್ಟ್ರ ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಆರಂಭಗೊಂಡಿದ್ದು, ಗುರುವಾರ ಬಿಎ ಪ್ರಥಮ ಸೆಮಿಸ್ಟರ್ ಎಕ್ಸಾಂ ನಡೆಯುತ್ತಿತ್ತು. ಮಧ್ಯಾಹ್ನ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಧರ್ಮರಾಜ್ ಸಿಂಗ್ ಎಂಬಾತ ಮೊಬೈಲ್ ಬಳಸಿ ನಕಲು ಮಾಡುವಾಗ ಸಿಕ್ಕಿ ಬಿದ್ದಿದ್ದನು. ಇದನ್ನೂ ಓದಿ: ಎಕ್ಸಾಂ ಹಾಲ್‍ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಸೂಪರ್ ಸ್ಮಾರ್ಟ್ ನಕಲು
Advertisement
Advertisement
ಕೊಠಡಿಯ ಮೇಲ್ವಿಚಾರಕರು ವಿದ್ಯಾರ್ಥಿಯನ್ನು ಕರೆದುಕೊಂಡು ಪ್ರಾಂಶುಪಾಲರ ಬಳಿ ತೆರಳಿದ್ದಾರೆ. ಪ್ರಾಂಶುಪಾಲರು ನಕಲು ಕೇಸ್ ದಾಖಲಿಸಿಕೊಳ್ಳುತ್ತಿದ್ದಂತೆ ಗಾಬರಿಗೊಂಡ ವಿದ್ಯಾರ್ಥಿ ಉತ್ತರ ಪತ್ರಿಕೆ ತೆಗೆದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ವಿದ್ಯಾರ್ಥಿಯನ್ನು ತಡೆಯಲು ಪ್ರಿನ್ಸಿಪಾಲರು ಮುಂದಾಗಿದ್ದಾರೆ. ಭಯಗೊಂಡಿದ್ದ ವಿದ್ಯಾರ್ಥಿ ಟೇಬಲ್ ಮೇಲಿದ್ದ ಕತ್ತರಿಯಿಂದ ಹಲ್ಲೆ ಮಾಡಿದ್ದಾನೆ.
Advertisement
ಕೂಡಲೇ ಎಚ್ಚೆತ್ತ ಕಾಲೇಜು ಸಿಬ್ಬಂದಿ ಪ್ರಾಂಶುಪಾಲ ಡಾ.ಜೆ.ಬಿ.ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ವಿದ್ಯಾರ್ಥಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಾಂಶುಪಾಲರ ಎದೆ ಮತ್ತು ತೋಳುಗಳಿಗೆ ಗಾಯವಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ. ಈ ಎಲ್ಲ ದೃಶ್ಯಗಳು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಒಂದೇ ಉತ್ತರ, ಒಂದೇ ರೀತಿ ತಪ್ಪು – 959 ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು