ಬಾಗಲಕೋಟೆ: ಗ್ರಾಮದಲ್ಲಿ ನಿಲ್ದಾಣವಿದ್ದರೂ ಬಸ್‍ಗಳನ್ನು ನಿಲ್ಲಿಸೊಲ್ಲ ಅಂತ ವಿದ್ಯಾರ್ಥಿಗಳು ಸಾರಿಗೆ ಬಸ್‍ಗಳನ್ನು ತಡೆದು, ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರನ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಹೊಸೂರು ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ- ಕಾಲೇಜುಗಳಿಗೆ ಹೋಗಲು ಸಾರಿಗೆ ಬಸ್‍ಗಳನ್ನೇ ಅವಲಂಬಿಸಿದ್ದಾರೆ. ಅಲ್ಲದೆ ಈ ಗ್ರಾಮದಲ್ಲಿ ಬಸ್ ನಿಲ್ದಾಣದ ವ್ಯವಸ್ಥೆ ಕೂಡ ಇದೆ. ಆದ್ರೆ ಸಾರಿಗೆ ಚಾಲಕರು ಮಾತ್ರ ಇಲ್ಲಿ ಬಸ್ ನಿಲ್ಲಿಸದೇ ಹಾಗೆಯೇ ಹೋಗುವುದು ವಿದ್ಯಾರ್ಥಿಗಳ ಕೋಪಕ್ಕೆ ಕಾರಣವಾಗಿದೆ. ನಿಲ್ದಾಣವಿದ್ದರು ಬಸ್ ನಿಲ್ಲಿಸಲ್ಲ, ಇದರಿಂದ ನಮಗೆಲ್ಲ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಒಂದಲ್ಲ ಎರಡಲ್ಲ ದಿನನಿತ್ಯ ಇದೇ ರಗಳೆ. ಬಸ್ ನಿಲ್ಲಿಸದೇ ಹಾಗೆಯೇ ಹೋದರೆ ಸಾರ್ವಜನಿಕರು ಏನು ಮಾಡಬೇಕು? ಹೇಗೆ ಪ್ರಯಾಣಿಸಬೇಕು? ನಿಲ್ದಾಣವಿದ್ದರು ಏಕೆ ಬಸ್ ನಿಲ್ಲಿಸಲ್ಲ ಅಂತ ಪ್ರಶ್ನಿಸಿ ಜಮಖಂಡಿ-ಕಾಗವಾಡ ರಾಜ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಸಾರಿಗೆ ಬಸ್‍ಗಳ ಸಂಚಾರಕ್ಕೆ ತಡೆ ಮಾಡಿದ್ದಾರೆ. ಅಲ್ಲದೆ ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv