ಬೆಂಗಳೂರು: ಸುಬ್ರಮಣ್ಯಪುರ (Subramanyapura) ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಪ್ರಬುದ್ಧಾ ಕೊಲೆ ಪ್ರಕರಣವನ್ನು (Prabuddha Murder Case) ಸಿಐಡಿ (CID) ಹೆಗಲಿಗೆ ವಹಿಸಲು ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣದ ಸುಬ್ರಮಣ್ಯಪುರದಲ್ಲಿ ಪ್ರಬುದ್ಧಾ ಕೊಲೆ ನಡೆದಿತ್ತು. ಇದರಿಂದ ನೊಂದ ಪ್ರಬುದ್ಧಾ ತಾಯಿ ಸೌಮ್ಯಾ ಸಿಎಂಗೆ ಮನವಿ ಕೊಟ್ಟಿದ್ದರು. ತಾಯಿ ಮನವಿ ಮೇರೆಗೆ ಸಿಐಡಿಗೆ ಕೇಸ್ ನೀಡುವಂತೆ ಡಿಜಿ-ಐಜಿಪಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇದನ್ನೂ ಓದಿ: ಅಬ್ಬಿ ಫಾಲ್ಸ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ನೀರುಪಾಲದ ಯುವಕ
ಸಿಎಂಗೆ ದೂರು ನೀಡಿದ ಬಳಿಕ ಕೊಲೆಯಾದ ಪ್ರಬುದ್ಧಾ ತಾಯಿ ಸೌಮ್ಯಾ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಮಗಳನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಬಳಿಕ ಆತನಿಗೆ ಜಾಮೀನು ಸಿಕ್ಕಿದೆ. ಈ ಸಂಬಂಧ ಸಿಎಂ ಅವರಿಗೆ ಮನವಿ ಕೊಟ್ಟಿದ್ದೇವೆ. ಸಿಐಡಿ ತನಿಖೆಗೆ ನೀಡುವಂತೆ ಮನವಿ ಮಾಡಿದ್ದೆ. ಸಿಎಂ ಸಿಐಡಿಗೆ ವಹಿಸಲು ಒಪ್ಪಿಗೆ ನೀಡಿದ್ದಾರೆ. ಕೇಸ್ ತನಿಖೆ ಆಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: 1 ಲಕ್ಷ ರೂ. ವ್ಯವಹಾರಕ್ಕೆ 1 ಸಾವಿರ ರೂ. ಕಮಿಷನ್ – ವಂಚನೆಗಾಗಿ ಬಾಡಿಗೆಗೆ ಸಿಗುತ್ತೆ ಬ್ಯಾಂಕ್ ಖಾತೆ!
ಪ್ರಕರಣ ಏನು?
ಮೇ 15 ರಂದು 20 ವರ್ಷದ ಪ್ರಬುದ್ಧಾ ಮೃತದೇಹ ಮನೆಯ ಬಾತ್‌ರೂಂನಲ್ಲಿ ಪತ್ತೆ ಆಗಿತ್ತು. ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಅಂತಾ ಪೊಲೀಸರು ಪರಿಗಣಿಸಿದ್ದರು. ಮಗಳ ಸಾವಿನ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಬಿಯರ್ ಬಾಟಲಿಯಿಂದ ಹಲ್ಲೆಗೈದು ಎಸ್ಕೇಪ್ ಆಗಲು ಯತ್ನ – ಆರೋಪಿ ಕಾಲಿಗೆ ಗುಂಡೇಟು
ನನ್ನ ಮಗಳ ಕತ್ತು ಮತ್ತು ಕೈಯನ್ನ ಚಾಕುವಿನಿಂದ ಕುಯ್ದು ಕ್ರೂರವಾಗಿ ಕೊಲೆ ಮಾಡಿದ್ದಾರೆ. ಮುಖಕ್ಕೆ ಮತ್ತು ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆಯಲಾಗಿದೆ. ಹೀಗಾಗಿ ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಅಂತ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರಿಗೆ ಸ್ನೇಹಿತನ ಕನ್ನಡಕ ರಿಪೇರಿ ವಿಚಾರದಲ್ಲಿ ಅಪ್ರಾಪ್ತನೇ ಪ್ರಬುದ್ಧಾ ಕೊಲೆ ಮಾಡಿರುವುದು ತಿಳಿದಿದೆ. ಇದನ್ನೂ ಓದಿ: ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಹೆಚ್‌ಡಿಕೆಯ ರಾಜಕಾರಣ, ದಿನಚರಿ ನಡೆಯಲ್ಲ: ಡಿ.ಕೆ.ಸುರೇಶ್
ಕೊಲೆಮಾಡಿದ ಅಪ್ರಾಪ್ತ ತನ್ನ ಸ್ನೇಹಿತನ ಕನ್ನಡಕ ಡ್ಯಾಮೇಜ್ ಮಾಡಿದ್ದನು. ಇದನ್ನು ರಿಪೇರಿ ಮಾಡಿಸಿಕೊಡುವಂತೆ ಸ್ನೇಹಿತ ಪಟ್ಟು ಹಿಡಿದಿದ್ದನು. ಹಾಗಾಗಿ ಅಪ್ರಾಪ್ತ ಪ್ರಬುದ್ಧಾ ಮನೆಗೆ ಬಂದಿದ್ದನು. ಹೀಗೆ ಬಂದವನೇ ಪ್ರಬುದ್ಧಾ ಪರ್ಸ್‌ನಿಂದ 2 ಸಾವಿರ ರೂ. ಎಗರಿಸಿದ್ದಾನೆ. ಈ ವಿಚಾರ ಪ್ರಬುದ್ಧಾ ಗಮನಕ್ಕೆ ಬಂದಿದ್ದು, ಆಕೆ ಬಾಲಕನನ್ನು ಪ್ರಶ್ನೆ ಮಾಡಿದ್ದಾಳೆ. ಆಗ ಬಾಲಕ, ತಪ್ಪಾಯ್ತು ಕ್ಷಮಿಸಿಬಿಡು ಎಂದು ಕಾಲು ಹಿಡಿದುಕೊಂಡಿದ್ದಾನೆ. ಹೀಗೆ ಕಾಲು ಹಿಡಿದಾಗ ಪ್ರಬುದ್ಧಾ ಆಯಾತಪ್ಪಿ ಬಿದ್ದಿದ್ದಾಳೆ. ಇದನ್ನೂ ಓದಿ: ಮೂರು ಡಿಸಿಎಂ ಹುದ್ದೆ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಯತೀಂದ್ರ ಸಿದ್ದರಾಮಯ್ಯ
ಕೆಳಗಡೆ ಬಿದ್ದ ಕಾರಣ ಆಕೆಯ ತಲೆಗೆ ಬಲವಾದ ಪೆಟ್ಟು ಬಿದ್ದು ಮೂರ್ಛೆ ಹೋಗಿ ಪ್ರಜ್ಞೆ ತಪ್ಪಿದ್ದಾಳೆ. ಇದರಿಂದ ಭಯಬಿದ್ದ ಅಪ್ರಾಪ್ತ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯುವತಿ ಕೈ ಕುಯ್ದಿದ್ದನು. ಕೈಯಲ್ಲಿ ರಕ್ತಸ್ರಾವ ಆಗಿ ಪ್ರಬುದ್ಧಾ ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಬಹಿರಂಗವಾಗಿದೆ. ಇದನ್ನೂ ಓದಿ: ಸಚಿವ ರಾಜಣ್ಣ ಹೈಕಮಾಂಡ್ ಬಳಿ ಹೋಗಿ ಸಿಎಂ ಹುದ್ದೆಯೇ ಕೇಳಲಿ: ಪ್ರಿಯಾಂಕ್ ಖರ್ಗೆ ಕಿಡಿ