ನೆಲಮಂಗಲ: ಸ್ನೇಹಿತೆ ರೂಂಗೆ ಕರೆದೊಯ್ದು ವಿದ್ಯಾರ್ಥಿನಿ (Student) ದೇವಿಶ್ರೀ ಹತ್ಯೆ ಮಾಡಿದ ಪ್ರಕರಣ ಸಂಬಂಧ ಕೊಲೆ ಆರೋಪಿಯನ್ನು ಮಾದನಾಕನಹಳ್ಳಿ ಪೊಲೀಸರು (Madanayakanahalli Police) ತಿರುಪತಿಯಲ್ಲಿ ಬಂಧಿಸಿದ್ದಾರೆ.
ದೇವಿಶ್ರೀ ಹಾಗೂ ಪ್ರೇಮ್‌ವರ್ಧನ್ ಇಬ್ಬರೂ ಪ್ರೇಮಿಗಳು. ಇವರಿಬ್ಬರೂ ಆಂಧ್ರ ಮೂಲದವರಾಗಿದ್ದು, ದ್ವಿತೀಯ ಪಿಯುಸಿವರೆಗೂ ಒಂದೇ ಕಾಲೇಜಿನಲ್ಲಿ ಓದಿದ್ದರು. ಬಳಿಕ ದೇವಿಶ್ರೀ ಬಿಬಿಎಂ ಮಾಡಲು ಬೆಂಗಳೂರಿಗೆ ಬಂದಿದ್ದಳು. ಈ ವೇಳೆ ಪ್ರೇಮ್‌ವರ್ಧನ್ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಬೆಂಗಳೂರಿಗೆ (Bengaluru) ಬಂದಾಗಿನಿಂದ ದೇವಿಶ್ರೀಗೆ ಬೇರೊಂದು ಹುಡುಗನ ಜೊತೆ ಸ್ನೇಹ ಬೆಳೆದಿತ್ತು. ಇದನ್ನೂ ಓದಿ: Nelamangala | ಯುವತಿಯನ್ನ ಸ್ನೇಹಿತೆ ರೂಂಗೆ ಕರೆದೊಯ್ದು ಕೊಲೆಗೈದ ಯುವಕ
ದೇವಿಶ್ರೀ ಫೋನ್‌ನಲ್ಲಿ ಬೇರೊಂದು ಹುಡುಗನ ಜೊತೆ ಮಾತನಾಡುತ್ತಿದ್ದಳು. ಇದರಿಂದ ಪ್ರೇಮ್‌ವರ್ಧನ್ ಕೋಪಗೊಂಡಿದ್ದ. ಭಾನುವಾರ ಪ್ರೇಮ್‌ವರ್ಧನ್ ದೇವಿಶ್ರೀಯನ್ನ ಭೇಟಿ ಮಾಡಲು ಬಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಆರೋಪಿ ಪ್ರೇಮ್‌ವರ್ಧನ್‌ನನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ವ್ಯಾಪಾರಿಯ ಬಳಿ ಚಿನ್ನ ದರೋಡೆ – ಇಬ್ಬರು ಪಿಎಸ್‍ಐ ಸೇರಿ ನಾಲ್ವರು ಅರೆಸ್ಟ್

