ಮೈಸೂರು: ನಿಂತಿದ್ದ ರೈಲಿನಲ್ಲಿ ಫೋಟೋ ಶೂಟ್ ಮಾಡುವ ವೇಳೆ ನಡೆದ ಅವಘಡದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಗರದ ನಾಗನಹಳ್ಳಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.
ಪ್ರೀತಂ (15) ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದು, ಹವ್ಯಾಸಿ ಫೋಟೋ ಶೂಟ್ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಅವಘಡ ಕುರಿತು ಮಾಹಿತಿ ಪಡೆದು ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಧ್ಯಾಹ್ನ ವೇಳೆಗೆ ಘಟನೆ ನಡೆದಿದ್ದು, ಫೋಟೋಗೆ ಪೋಸ್ ನೀಡಲು ನಿಂತ ವೇಳೆ ರೈಲ್ವೇ ವಿದ್ಯುತ್ ತಂತಿಗೆ ವಿದ್ಯಾರ್ಥಿಯ ಕೈ ಸ್ಪರ್ಶಿಸಿದ ಕಾರಣ ಸ್ಥಳದಲ್ಲೇ ಪ್ರೀತಂ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv