Connect with us

Latest

ನಕಲು ಮಾಡಿ ಸಿಕ್ಕಿಬಿದ್ದಿದ್ದಕ್ಕೆ ಕಾಲೇಜಿನ 4ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ!

Published

on

ಮುಂಬೈ: ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿಯೊಬ್ಬ ಕಾಲೇಜಿನ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಔರಂಗಬಾದ್‍ನಲ್ಲಿ ನಡೆದಿದೆ.

ಸಚಿನ್ ವಾಘ್(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸಚಿನ್ ಬಿಎಸ್‍ಸಿ ಓದುತ್ತಿದ್ದು, ಪರೀಕ್ಷೆಯ ಸಂದರ್ಭದಲ್ಲಿ ನಕಲು ಮಾಡುತ್ತಿದ್ದನು. ನಕಲು ಮಾಡಿ ಪ್ರಿನ್ಸಿಪಲ್ ಬಳಿ ಸಿಕ್ಕಿಹಾಕಿಕೊಂಡಿದ್ದನು ಎಂದು ವರದಿಯಾಗಿದೆ.

ಪ್ರಿನ್ಸಿಪಲ್ ಪೋಷಕರನ್ನು ಕರೆ ಮಾಡಿ ಕಾಲೇಜಿಗೆ ಕರೆ ತರುವಂತೆ ಸಚಿನ್‍ಗೆ ಹೇಳಿದ್ದರು. ಇದ್ದರಿಂದ ಭಯಗೊಂಡ ಸಚಿನ್ ಕಾಲೇಜಿನ 4ನೇ ಮಹಡಿಯಿಂದ ಜಿಗಿದಿದ್ದಾನೆ. ಸಚಿನ್ ಜಿಗಿದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಸದ್ಯ ಕಾಲೇಜು ಪ್ರಿನ್ಸಿಪಲ್ ವಿರುದ್ಧ ಕೇಸ್ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *