ಚೆನ್ನೈ: ಶಿಕ್ಷಕರೊಬ್ಬರು (Teacher) ವಿದ್ಯಾರ್ಥಿನಿಯನ್ನು (Student) ಸುಳ್ಳುಗಾರ್ತಿ ಎಂದಿದ್ದಕ್ಕೆ ಮನನೊಂದು ಆಕೆ ಸರ್ಕಾರಿ ಶಾಲೆಯ (Government School) ಮೊದಲ ಮಹಡಿಯಿಂದ ಜಿಗಿದ ಘಟನೆ ತಮಿಳುನಾಡಿನ (Tamil Nadu) ಕರೂರ್‌ನಲ್ಲಿ ನಡೆದಿದೆ.
ಘಟನೆಯ ನಂತರ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ವಿದ್ಯಾರ್ಥಿನಿ ಎಡವಿ ಬಿದ್ದಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಿದ್ದಾರೆ. ಈ ವೇಳೆ ಆ ವಿದ್ಯಾರ್ಥಿನಿ ಏನಾಯಿತು ಎಂದು ವಿವರಿಸಿದ ವೀಡಿಯೋ ವೈರಲ್ ಆಗಿದೆ.
Advertisement
Advertisement
ವೀಡಿಯೋದಲ್ಲಿ ಏನಿದೆ?: ನಮ್ಮ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಓರ್ವ ಹುಡುಗಿ ಬಂದು ಆಕೆಯ ಮೊಬೈಲ್‍ನಲ್ಲಿ ಕಾರ್ಯಕ್ರಮದ ವೀಡಿಯೋವನ್ನು ತೆಗೆದುಕೊಡಲು ಹೇಳಿದಳು. ಮೊದಲು ನಾನು ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಮೊಬೈಲ್‍ನ್ನು ಬೇರೆಯವರಿಗೆ ರವಾನಿಸಲು ತಿಳಿಸಿದಳು. ಆದರೆ ಆ ವ್ಯಕ್ತಿ ದೂರದ್ದಲ್ಲಿದ್ದ ಕಾರಣ ನಾನೇ ಕಾರ್ಯಕ್ರಮದ ವೀಡಿಯೋವನ್ನು ಮಾಡುವ ಪರಿಸ್ಥಿತಿ ಬಂತು. ಹಾಗೆ ಮಾಡಿದ್ದಕ್ಕೆ ಟೀಚರ್ ನನ್ನನ್ನು ಗದರಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ನಗರಸಭಾ ಸದಸ್ಯನ ಬರ್ತ್‌ಡೇಯಲ್ಲಿ ನಂಗನಾಚ್ – ಯುವಕನಿಗೆ ಚಾಕು ಇರಿತ
Advertisement
Advertisement
ಆಗ ನಾನು ನಡೆದ ವಿಷಯ ತಿಳಿಸಿದರೂ ಅವರು ನನ್ನ ಮಾತನ್ನು ನಂಬಲಿಲ್ಲ. ಅಷ್ಟೇ ಅಲ್ಲದೇ ಎಲ್ಲರ ಮುಂದೆ ನನ್ನನ್ನು ಸುಳ್ಳುಗಾರ್ತಿ ಎಂದು ಕರೆದರು. ಇದರಿಂದಾಗಿ ಬೇರೆ ವಿದ್ಯಾರ್ಥಿಗಳು ನನ್ನನ್ನು ಅದೇ ಭಾವನೆಯಿಂದ ನೋಡಿದರು. ಈ ಹಿನ್ನೆಲೆಯಲ್ಲಿ ಮನನೊಂದು ಮಹಡಿಯಿಂದ ಜಿಗಿದೆ ಎಂದು ತಿಳಿಸಿದಳು. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುತ್ತೆ.. ಧೈರ್ಯವಿದ್ರೆ ನಿಲ್ಲಿಸಿ – ದೀದಿಗೆ ಬಿಜೆಪಿ ಸವಾಲು