ಶಿವಮೊಗ್ಗ: ರ‍್ಯಾಗಿಂಗ್ ಮಾಡಬೇಡ ಎಂದು ಬುದ್ಧಿವಾದ ಹೇಳಿದ ಹಿರಿಯ ವಿದ್ಯಾರ್ಥಿಗೆ, ಕಿರಿಯ ವಿದ್ಯಾರ್ಥಿ ಚೂರಿ ಹಾಕಿದ ಘಟನೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದೆ.
ಕ್ಯಾಂಪಸ್ ನಲ್ಲಿ ಇರುವ ಜ್ಯೂಬಿಲಿ ಬಿಲ್ಡಿಂಗ್ ನಲ್ಲಿ ಈ ಘಟನೆ ನಡೆದಿದ್ದು, ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬ ಗೆಳೆಯರ ಜೊತೆ ಸೇರಿಕೊಂಡು ಕೆಲ ದಿನಗಳ ಹಿಂದೆ ಕಾಲೇಜಿನ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ. ಇದನ್ನ ಗಮನಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳು ಇವನಿಗೆ ಉಪನ್ಯಾಸಕರ ಎದುರೇ ಕರೆದು ಒಂದೆರಡು ಹೊಡೆತ ಕೊಟ್ಟು ಬುದ್ಧಿವಾದ ಹೇಳಿ ಕಳಿಸಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿ ಇಂದು ಹೊರಗಿನ ಗೆಳೆಯರ ಜೊತೆ ಬಂದು ಹಿರಿಯ ವಿದ್ಯಾರ್ಥಿಗೆ ಚೂರಿ ಹಾಕಿ ಪರಾರಿ ಆಗಿದ್ದಾನೆ. ಘಟನೆಯಿಂದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
Advertisement
ಸದ್ಯಕ್ಕೆ ಗಾಯಗೊಂಡಿರುವ ವಿದ್ಯಾರ್ಥಿ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತು ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ವಿದ್ಯಾರ್ಥಿಗಾಗಿ ಬಲೆ ಬೀಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv