ತಿರುವನಂತಪುರಂ: ವಿದ್ಯಾರ್ಥಿನಿಯೊಬ್ಬಳು ಪರೀಕ್ಷೇಗೆ ತೆರಳುವ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಆಗ್ನಿ ಅವಘಡಕ್ಕೆ ತುತ್ತಾಗಿರುವ ಘಟನೆ ಕೇರಳದ ಕೊಡುವಾಯೂರ್ ನಲ್ಲಿ ನಡೆದಿದೆ.
ಮೃತ ದುರ್ದೈವಿ ವಿದ್ಯಾರ್ಥಿನಿಯನ್ನು ವರ್ಷ(17) ಎಂದು ಗುರುತಿಸಲಾಗಿದೆ. ಬೆಂಕಿ ಹೊತ್ತಿಕೊಂಡು ಸೆ.2ರಿಂದ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ವರ್ಷ ಸೋಮವಾರ ಎರ್ನಾಕುಲಂನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
Advertisement
Advertisement
ಕೇರಳ ಜಿಲ್ಲೆಯ ಪಾಲಕ್ಕಾಡ್ ಜಿಲ್ಲೆಯ ಕೊಡುವಾಯೂರ್ ಗ್ರಾಮದ ಕಣ್ಣನ್ ಹಾಗೂ ರತಿ ಎಂಬವರ ಪುತ್ರಿಯಾಗಿರುವ ವರ್ಷ, ಪಲ್ಲಸ್ಸನದ ವಿಐಎಂ ಸೆಕೆಂಡರಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಎಂದಿನಂತೆ ಪರೀಕ್ಷೆಗೆ ತೆರಳುವ ಮುನ್ನ ಈಕೆ ಮೊಟ್ಟೆ ಬೇಯಿಸಲು ತೆರಳಿದ್ದಾಳೆ. ಬೆಂಕಿ ಹೊತ್ತಿಸಲೆಂದು ಒಲೆಗೆ ಸೀಮೆ ಎಣ್ಣೆಯನ್ನ ಎರಚಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಈಕೆಯ ಮೈಮೇಲೆ ತಗುಲಿದೆ. ಇದನ್ನೂ ಓದಿ: ಮಳೆಗಾಗಿ ಹುಡುಗಿಯರ ಬೆತ್ತಲ ಮೆರವಣಿಗೆ
Advertisement
Advertisement
ಮೈಮೇಲೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ನೋವಿನಿಂದ ವರ್ಷ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಕೇಳಿಸಿಕೊಂಡ ಆಕೆತ ತಂದೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದಾಗಲೇ ವರ್ಷ ದೇಹ ಶೇ.65ರಷ್ಟು ಸುಟ್ಟು ಹೋಗಿತ್ತು. ಹೀಗಾಗಿ ಅಲ್ಲಿನ ವೈದ್ಯರು ತ್ರಿಶೂರ್ ನಲ್ಲಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ವರ್ಷ ಹೆಚ್ಚಿನ ಚಿಕಿತ್ಸೆಗಾಗಿ ತ್ರಿಶೂರ್ ಮೆಡಿಕಲ್ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಬೆಡ್ ಖಾಲಿಯಿಲ್ಲದ ಪರಿಣಾಮ ಅಲ್ಲಿಂದ ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಮೊಬೈಲ್ ನುಂಗಿ 4 ದಿನ ಹೊಟ್ಟೆಯಲ್ಲಿಟ್ಟುಕೊಂಡ
ಚಿಕಿತ್ಸೆಗೆ ಒಟ್ಟು 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಮುಂಗಡವಾಗಿ 2.5 ಲಕ್ಷ ಕಟ್ಟುವಂತೆ ಖಾಸಗಿ ಆಸ್ಪತ್ರೆಯವರು ವರ್ಷ ತಂದೆಗೆ ತಿಳಿಸಿದ್ದಾರೆ. ಬಡ ಆಟೋ ಡ್ರೈವರ್ ಆಗಿರುವ ವರ್ಷ ತಂದೆ ಕಣ್ಣನ್ ಅಷ್ಟೊಂದು ಹಣ ಕಟ್ಟಲಾಗದೆ ಎರ್ನಾಕುಲಂನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ವರ್ಷ ಮೃತಪಟ್ಟಿದ್ದಾಳೆ. ಮೃತಳ ದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಮೃತ ವರ್ಷ ತಂದೆ, ತಾಯಿ ಹಾಗೂ ಸಹೋದರರಾದ ಜಿಷ್ಣು ಹಾಗೂ ವಿಷ್ಣುವನ್ನು ಅಗಲಿದ್ದಾಳೆ. ಇದನ್ನೂ ಓದಿ: ಒಟ್ಟಾಗಿ ಹೋಗೋಣವೆಂದು ಹೆಚ್‍ಡಿಕೆಗೆ ಹೇಳಿದ್ದೇನೆ: ಮೈತ್ರಿ ಬಗ್ಗೆ ಸಿಎಂ ಸ್ಪಷ್ಟನೆ