ಬೆಂಗಳೂರು: ರಷ್ಯಾ ಮಾಡಿದ ದಾಳಿಗೆ ಸಿಲುಕಿರುವ ಉಕ್ರೇನ್ ಜನರ ಪರಿಸ್ಥಿತಿ ದಿನದಿಂದದಿನಕ್ಕೆ ಹದಗೆಡುತ್ತಿದೆ. ಯುದ್ಧ ಪೀಡಿತ ಪ್ರದೇಶ ಉಕ್ರೇನ್‍ನಲ್ಲಿ ಸಿಲಿಕಿಕೊಂಡಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಈಗಾಗಲೇ ಮೂರು ಬ್ಯಾಚ್‍ನಲ್ಲಿ ಏರ್‌ಲಿಫ್ಟ್ ಮಾಡಲಾಗಿದೆ.
ಏರ್‍ಲಿಫ್ಟ್ ನಿಂದ ಬೆಂಗಳುರಿಗೆ ಬಂದಿಳಿದ ವಿದ್ಯಾರ್ಥಿನಿ ಹಬೀಬಾ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಮೂಲತಃ ಚಿತ್ರದುರ್ಗದಳಾಗಿದ್ದೇನೆ. ನಾನು ಸೆಕೆಂಡಿಯರ್ ಓದುತ್ತಿದ್ದೇನೆ. ನಮಗೆ ಮೊನ್ನೆವರೆಗೂ ತರಗತಿ ನಡೆದಿದೆ. ನಮ್ಮ ಜೀವನದ ಪ್ರಶ್ನೆ ಇದಾಗಿದೆ, ನಾವು ಮತ್ತೇ ಹೋಗುತ್ತೇವೆ. ಉಕ್ರೇನ್ ಎಜುಕೇಶನ್ ಸಿಸ್ಟಮ್ ತುಂಬಾ ಚೆನ್ನಾಗಿದೆ. ನಾನು ತುಂಬಾ ಕಲಿತಿದ್ದೇನೆ ಎಂದಿದ್ದಾರೆ.
Advertisement
Advertisement
ಅಪ್ಪ ಅಮ್ಮನ ಮೂಖ ನೋಡಲು ಕಾಯುತ್ತಿದ್ದೇನು. ನಾವು ಇರುವ ಸ್ಥಳಕ್ಕೆ ಹತ್ತಿರ ಇರುವ ಪ್ರದೇಶಗಳನ್ನು ರಷ್ಯಾ ಆಕ್ರಮಣ ಮಾಡಿಕೊಂಡಾಗ ನಾವು ಭಯಭೀತರಾಗಿದ್ದೇವು. ಭಾರತ, ಕರ್ನಾಟಕ ಸರ್ಕಾರ ನಮಗೆ ಸಹಾಯ ಮಾಡಿದ್ದಾರೆ. ಉಕ್ರೇನ್‍ನಲ್ಲಿ ಟೆಂಪ್ರೆಚರ್ ಕೂಡಾ ಕಡಿಮೆ ಇದೆ. ಊಟ, ನೀರು ಇಲ್ಲದೆ ಸಂಕಷ್ಟ ಪಡುಂತಾಗಿದೆ. ಇದನ್ನೂ ಓದಿ: ಕರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ..!
Advertisement
Advertisement
ಯುದ್ಧ ಆಗಿರುವ ದಿನವೇ ನಾವು ಆಹಾರವನ್ನು ತೆಗೆದುಕೊಂಡು ಇಟ್ಟಿದ್ದೇವು. ಉಕ್ರೇನ್ ಸಿಟಿಜನ್ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿರಿ, ಬಾರ್ಡ್ ಕಡೆ ಹೋಗಿ. ಆದರೆ ಪುರುಷರು ಬನ್ನಿ ಯುದ್ಧದಲ್ಲಿ ಕೈ ಜೋಡಿಸಿ ಎಂದು ಸೂಚನೆ ನೀಡಲಾಗಿದೆ. ಕೀವ್, ಖಾರ್ಕೀವ್‍ನಲ್ಲಿರುವ ಜನರು ತುಂಬಾ ಭಯಬೀತರಾಗಿದ್ದಾರೆ. ಅಲ್ಲಿರುವ ನಮ್ಮ ಸ್ನೇಹಿತರನ್ನು ಸಂಪರ್ಕಿಸಲು ನಮಗೆ ಸಾಧ್ಯವಾಗಲಿಲ್ಲ. ಅಲ್ಲಿ ನೆಟ್‍ವರ್ಕ್‍ಗಳನ್ನು ಕಡಿತ ಮಾಡಲಾಗಿದೆ. ಅಲ್ಲಿ ಇನ್ನು ಹಲವು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರು ಮರಳಿ ತವರಿಗೆ ಬರವಂತಾಗಲಿ ಎಂದಿದ್ದಾರೆ.