ಮೈಸೂರು: ಪಿಯುಸಿಯಲ್ಲಿ 590 ಅಂಕ ತೆಗೆದು ಶ್ರೇಯಾಂಕ ಪಡೆದ ವಿದ್ಯಾರ್ಥಿಯೊಬ್ಬ ದರೋಡೆಗಿಳಿದ ಪ್ರಸಂಗವೊಂದು ಬೆಳಕಿಗೆ ಬಂದಿದೆ. 20 ವರ್ಷದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಟಾಪರ್ ವಿದ್ಯಾರ್ಥಿ ಸನತ್ ತನ್ನದೇ ತಂಡ ಕಟ್ಟಿಕೊಂಡು ದರೋಡೆಗಿಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈತ ವಿದ್ಯಾವಿಕಾಸ್ ಕಾಲೇಜಿನ ಸಿವಿಲ್ ಇಂಜಿನಿಯರ್ ವಿದ್ಯಾರ್ಥಿ ಓ.ಎಸ್.ಖಾನ್ (19), ಲಷ್ಕರ್ ಮೊಹಲ್ಲಾದ ಇಸ್ಮಾಯಿಲ್ ಖಾನ್(19) ಸೈಯದ್ ಸೈಫ್(19) ಮತ್ತು 16 ವರ್ಷದ ಡಿಪ್ಲೋ ಮಾ ಮಾಡುತ್ತಿರುವ ವಿದ್ಯಾರ್ಥಿಯ ಜೊತೆ ಸೇರಿ ಒಂದು ತಂಡವನ್ನು ಕಟ್ಟಿಕೊಂಡು ದರೋಡೆ ಮಾಡಿದ್ದನು. ಸದ್ಯ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Advertisement
ಸನತ್ ಆನ್‍ಲೈನ್‍ನಲ್ಲಿ 20 ಸಾವಿರ ಮೌಲ್ಯದ ಹೆಡ್‍ಫೋನ್ ಬುಕ್ ಮಾಡಿದ್ದನು. ಫೆ. 15ರಂದು ಹೆಡ್‍ಫೋನ್ ತಲುಪಿಸಲು ಬಂದಿದ್ದ ಆನ್ ಲೈನ್ ನೌಕರನನ್ನು ನಿರ್ಜನ ಪ್ರದೇಶಕ್ಕೆ ಕರೆಸಿ ಆತನ ಕಣ್ಣಿಗೆ ಖಾರದ ಪುಡಿ ಎರಚಿ, ಹೆಡ್‍ಫೋನ್ ಕಸಿದು ಈ ತಂಡ ಪರಾರಿಯಾಗಿತ್ತು. ಈ ಬಗ್ಗೆ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement
ಬುಧವಾರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಐಷಾರಾಮಿ ಜೀವನ ನಡೆಸಲು ಈ ಕೃತ್ಯ ಎಸಗಿದ್ದೇವೆ ಎಂದು ತಿಳಿಸಿದ್ದಾರೆ.
Advertisement