ಭೂಪಾಲ್: ತನ್ನ ಮಾಜಿ ವಿದ್ಯಾರ್ಥಿಯಿಂದ ದಾಳಿಗೊಳಗಾಗಿ ಕಳೆದ ಐದು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಮಧ್ಯಪ್ರದೇಶದ ಇಂಧೋರ್‌ನ (Indore) ಖಾಸಗಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಡಾ.ವಿಮುಕ್ತ ಶರ್ಮಾ (54) ಮೃತ ದುದೈವಿ. ಮಾರ್ಕ್ಸ್‌ಕಾರ್ಡ್ ವಿಷಯವಾಗಿ ಗಲಾಟೆ ಮಾಡಿಕೊಂಡಿದ್ದ ಕಾಲೇಜಿನ ಹಳೇ ವಿದ್ಯಾರ್ಥಿ ಅಶುತೋಷ್ ಶ್ರೀವಾಸ್ತವ ನಂತರ ಪ್ರಾಂಶುಪಾಲರ ಮೇಲೆ ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿದ್ದಾನೆ. ಪ್ರಾಂಶುಪಾಲರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇಹವು ಶೇ.80 ರಷ್ಟು ಸುಟ್ಟುಹೋಗಿದ್ದರಿಂದ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ನೀಡಿದ ಚೀನಾ – ಅಮೆರಿಕ ಕಳವಳ
Advertisement
ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿತ್ತು. ಪ್ರಾಂಶುಪಾಲರ ಸಾವಿನ ನಂತರ ಕೊಲೆ ಎಂದು ಎಫ್‍ಐಆರ್‌ನಲ್ಲಿ (FIR) ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಆರೋಪಿ ನೀಡಿದ ಹೇಳಿಕೆಯನ್ನು ತಳ್ಳಿಹಾಕಿರುವ ಕಾಲೇಜು ಆಡಳಿತ ಮಂಡಳಿ, ಆತ ಕ್ರಿಮಿನಲ್ ಹಿನ್ನೆಲೆ ಉಳ್ಳವನಾಗಿದ್ದಾನೆ. ಆತನ ಮಾರ್ಕ್ಸ್‌ಕಾರ್ಡ್ ಪಡೆದುಕೊಳ್ಳುವಂತೆ ತಿಳಿಸಲಾಗಿತ್ತು. ಆದರೆ ಆತ ತೆಗೆದುಕೊಂಡು ಹೋಗಿರಲಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಮೋದಿ ಬಂದ್ಮೇಲೆ ದೇಶ ಅಭಿವೃದ್ಧಿಯಾಗಿಲ್ಲ, ನಾವು ಹುಟ್ಟುವ ಮುಂಚೆಯೇ ಆಗಿದೆ: ಹೆಚ್‌ಡಿಕೆ