Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡೆಲಿವರಿಯಾದ ಮರುದಿನವೇ ಪರೀಕ್ಷೆ ಬರೆದ ಬೆಂಗ್ಳೂರು ಯುವತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಡೆಲಿವರಿಯಾದ ಮರುದಿನವೇ ಪರೀಕ್ಷೆ ಬರೆದ ಬೆಂಗ್ಳೂರು ಯುವತಿ

Bengaluru City

ಡೆಲಿವರಿಯಾದ ಮರುದಿನವೇ ಪರೀಕ್ಷೆ ಬರೆದ ಬೆಂಗ್ಳೂರು ಯುವತಿ

Public TV
Last updated: December 8, 2019 1:19 pm
Public TV
Share
2 Min Read
STILL 2
SHARE

ಬೆಂಗಳೂರು: 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಮರುದಿನವೇ ತನ್ನ ಮಗುವನ್ನು ಎತ್ತಿಕೊಂಡು ಬಂದು ಪರೀಕ್ಷೆ ಬರೆದಿರುವ ಅಪರೂಪದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ.

ವಿದ್ಯಾರ್ಥಿನಿ ಹರ್ಷಿತಾ ಎಸ್.ಆರ್ (20) ಗುರುವಾರ ಮಧ್ಯಾಹ್ನ ಮಗುವಿನೊಂದಿಗೆ ಬಂದು ಪರೀಕ್ಷೆ ಬರೆದಿದ್ದಾಳೆ. ಈಕೆ ಬೆಂಗಳೂರಿನ ಎಚ್.ಕೆ.ಇ.ಎಸ್. ವೀರೇಂದ್ರ ಪಾಟೀಲ್ ಡಿಗ್ರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರವೇ ಆಕೆಗೆ ಹೆರಿಗೆ ನೋವು ಸ್ವಲ್ಪ ಕಾಣಿಸಿಕೊಂಡಿದೆ. ಆದರೂ ನೋವಿನಲ್ಲೇ ಪರೀಕ್ಷೆ ಬರೆದಿದ್ದಾಳೆ.

exam fee

ಬುಧವಾರ ಹರ್ಷಿತಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಒಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು ಮತ್ತೊಂದು ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು ಗುರುವಾರ ಆಸ್ಪತ್ರೆಯಿಂದ ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆಯನ್ನು ಬರೆದಿದ್ದಾಳೆ. ಹರ್ಷಿತಾ ಪರೀಕ್ಷೆ ಬರೆಯುವಾಗ ಪಕ್ಕದ ರೋಮಿನಲ್ಲೇ ಆಕೆಯ ತಾಯಿ ಮಗುವನ್ನು ನೋಡಿಕೊಳ್ಳುತ್ತಿದ್ದರು. ಹರ್ಷಿತಾ ಪ್ರತಿ 30 ನಿಮಿಷಕ್ಕೆ ಹೋಗಿ ಮಗುವಿಗೆ ಹಾಲುಣಿಸಿ ಬರುತ್ತಿದ್ದಳು.

ಈ ಬಗ್ಗೆ ಮಾತನಾಡಿದ ಹರ್ಷಿತಾ, “ನಾನು ಪರೀಕ್ಷೆ ಬರೆಯಲೇಬೇಕು ಎಂದು ನಿರ್ಧರಿಸಿದ್ದೆ. ಒಂದು ವೇಳೆ ಈಗ ಪರೀಕ್ಷೆ ಬರೆಯುವುದನ್ನು ನಾನು ಮಿಸ್ ಮಾಡಿಕೊಂಡಿದ್ದರೆ, ಇನ್ನೊಂದು ವರ್ಷ ನಾನು ಕಾಯಬೇಕಾಗಿತ್ತು. ಹೀಗಾಗಿ ನಾನು ಆಸ್ಪತ್ರೆಯಲ್ಲಿ ಪರೀಕ್ಷೆಗೆಂದು ಓದಿದ್ದೆ. ನನ್ನ ಕುಟುಂಬದವರು ಮತ್ತು ಕಾಲೇಜು ನನಗೆ ಬೆಂಬಲ ನೀಡಿದೆ” ಎಂದು ಸಂತಸದಿಂದ ಹೇಳಿದ್ದಾಳೆ.

image 1000 538115afe5

ಅಲ್ಲದೆ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಗುರುವಾರ ಮಧ್ಯಾಹ್ನದೊಳಗೆ ಡಿಸ್ಚಾರ್ಜ್ ಮಾಡುವಂತೆ ಹರ್ಷಿತಾ ವೈದ್ಯರಿಗೆ ಮನವಿ ಮಾಡಿಕೊಂಡಿದ್ದಳು. ಅದರಂತೆಯೇ ಕಾಲೇಜು ಸಹ ಹರ್ಷಿತಾಗೆ ಟೀ ಮತ್ತು ಬಿಸ್ಕೆಟ್‍ಗಳನ್ನು ನೀಡಿತ್ತು. ಜೊತೆಗೆ ಪರೀಕ್ಷೆ ಮುಗಿಯುವರೆಗೂ ಆಗಾಗ ವಿಶ್ರಾಂತಿ ಪಡೆದುಕೊಳ್ಳಲು ವಿರಾಮವನ್ನು ನೀಡಲಾಗಿತ್ತು.

ಹರ್ಷಿತಾಗೆ ಮಂಗಳವಾರ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ ಎಂದು ನಮಗೆ ಖಚಿತವಿರಲಿಲ್ಲ. ಆದರೂ ಆಕೆ ಪರೀಕ್ಷೆ ಬರೆದಳು. ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೀಗಾಗಿ ಗುರುವಾರ ಪರೀಕ್ಷೆ ಬರೆಯಲು ಬರುವುದಿಲ್ಲ ಎಂದುಕೊಂಡಿದ್ದೆವು. ಆದರೆ ಆಕೆ ಪರೀಕ್ಷೆ ಬರೆಯಲು ಬರುವ ಮೂಲಕ ನಮ್ಮನ್ನು ಆಶ್ಚರ್ಯಗೊಳಿಸಿದಳು. ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದ ಮರುದಿನವೇ 3 ಗಂಟೆ ಬೆಂಚ್ ಮೇಲೆ ಕುಳಿತುಕೊಂಡು ಪರೀಕ್ಷೆ ಬರೆಯುವುದು ಅಷ್ಟು ಸುಲಭವಲ್ಲ. ಅದನ್ನು ಹರ್ಷಿತಾ ಸಾಧಿಸಿ ತೋರಿಸಿದ್ದಾಳೆ. ನಿಜಕ್ಕೂ ಹರ್ಷಿತಾ ಇತರರಿಗೆ ಮಾದರಿಯಾಗಿದ್ದಾಳೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಮ್ಯಾಕ್ವಿಲಿನ್ ಸಿ ಮೋಸೆಸ್ ತಿಳಿಸಿದ್ದಾರೆ.

ಕೆಫೆ ಕಾಫಿ ಡೇ ಮೇಲ್ವಿಚಾರಕರೊಂದಿಗೆ ಹರ್ಷಿತಾ ಮದುವೆಯಾಗಿದ್ದಾಳೆ. ಪದವಿ ಮುಗಿದ ನಂತರ ಸರ್ಕಾರಿ ಕೆಲಸ ಪಡೆಯಬೇಕೆಂಬುದು ಆಕೆಯ ಕನಸು. ಹೀಗಾಗಿ ಡಿಸೆಂಬರ್ 12ಕ್ಕೆ ನಿಗದಿಯಾಗಿರುವ ಮುಂದಿನ ಪರೀಕ್ಷೆಯನ್ನು ಬರೆಯುತ್ತೇನೆ ಎಂದು ಹೇಳಿದ್ದಾಳೆ.

TAGGED:bengaluruchildcollegedeliveryexamhospitalPublic TVstudentಆಸ್ಪತ್ರೆಕಾಲೇಜುಡೆಲಿವರಿಪಬ್ಲಿಕ್ ಟಿವಿಪರೀಕ್ಷೆಬೆಂಗಳೂರುಮಗುವಿದ್ಯಾರ್ಥಿನಿ
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

N S Bosaraju
Bengaluru City

ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗಣ ಬಾರ್ಕಿ ಜಾತಿಗಳನ್ನು STಗೆ ಸೇರಿಸಲು ಕ್ರಮ: ಬೋಸರಾಜು

Public TV
By Public TV
6 minutes ago
Rohini Sindhuri MSME 3
Bengaluru City

ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್ ಮಾರ್ಗಸೂಚಿ ಅಳವಡಿಸಲು ಚಿಂತನೆ: ರೋಹಿಣಿ ಸಿಂಧೂರಿ

Public TV
By Public TV
9 minutes ago
shivam dube t20 world cup
Cricket

ಟಿ20 ವಿಶ್ವಕಪ್‌ನಲ್ಲಿ ಭಾರತ ಗೆದ್ದ ಬಳಿಕ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸಿದ ಶಿವಂ ದುಬೆ

Public TV
By Public TV
38 minutes ago
Channapatna Gas Cylinder Theft
Crime

ಗ್ಯಾಸ್ ಟ್ರಬಲ್ – ಚನ್ನಪಟ್ಟಣದ ಮನೆಯಲ್ಲಿ ಸಿಲಿಂಡರ್ ಕಳ್ಳತನ

Public TV
By Public TV
1 hour ago
Gas Auto LPG
Districts

ಎಲ್‌ಪಿಜಿ ಗ್ಯಾಸ್‌ ದರ ಏರಿಕೆ, ವಿತರಣೆಯೂ ಇಲ್ಲ – ಆಟೋ ಚಾಲಕರ ಪರದಾಟ

Public TV
By Public TV
1 hour ago
NCERT Textbook Row
Court

ಎನ್‌ಸಿಇಆರ್‌ಟಿ ಪುಸ್ತಕದಲ್ಲಿ ನ್ಯಾಯಂಗಕ್ಕೆ ಅಪಮಾನ ಆರೋಪ – ಎಲ್ಲ ಪುಸ್ತಕಗಳ ಪರಿಶೀಲನೆಗೆ ತಜ್ಞರ ಸಮಿತಿ ರಚನೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?