ಮೈಸೂರು: ಖೋ ಖೋ ಆಟದ (Kho Kho Game) ವೇಳೆ ಕುಸಿದು ಬಿದ್ದು ವಿದ್ಯಾರ್ಥಿ (Student) ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆಯ ನಂಜನಗೂಡು (Nanjangud) ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹರದನಹಳ್ಳಿ ಗ್ರಾಮದ ಶಶಾಂಕ್ (13) ಮೃತ ವಿದ್ಯಾರ್ಥಿ. ಶಶಾಂಕ್ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಶಾಲಾ ಅವಧಿ ಮುಗಿದ ಬಳಿಕ ಈತ ಖೋ ಖೋ ಅಭ್ಯಾಸ ಮಾಡಲು ಹೋಗಿದ್ದಾನೆ. ಖೋ ಖೋ ಆಡುತ್ತಿದ್ದ ಸಂದರ್ಭ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಪ್ರೇಮಿಗಳಿಬ್ಬರ ದುರಂತ ಅಂತ್ಯ
ವಿದ್ಯಾರ್ಥಿ ಕುಸಿದು ಬಿದ್ದ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಈ ಕುರಿತು ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಿಡ್‌ನೈಟ್ ಆಪರೇಷನ್, ವೇಶ್ಯಾವಾಟಿಕೆಯಲ್ಲಿ ಭಾಗಿ ಶಂಕೆ – ಸಿನಿಮಿಯ ರೀತಿಯಲ್ಲಿ ವಿದೇಶಿಗರ ಬಂಧನ