ಬರ್ತ್ ಡೇ ಬಂಪ್ಸ್ ನಿಂದ ವಿದ್ಯಾರ್ಥಿ ಸಾವು-ಸುದ್ದಿಯ ಸತ್ಯಾಂಶ ರಿವೀಲ್

Public TV
2 Min Read
student death collage 1

ಬೆಂಗಳೂರು: ಹಾಸ್ಟೆಲ್‍ನಲ್ಲಿ ಹುಟ್ಟುಹಬ್ಬದ ಸಂಭ್ರಮದ ವೇಳೆ ಗೆಳೆಯರು ನೀಡಿದ್ದ ಬರ್ತ್ ಡೇ ಬಂಪ್ಸ್ ನಿಂದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದನು ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಆದರೆ ಇದೀಗ ಈ ಸುದ್ದಿಯ ಸತ್ಯಾಂಶ ಹೊರಬಿದ್ದಿದ್ದು, ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.

ಅಸಲಿಗೆ ಈ ಘಟನೆ ನಡೆದಿದ್ದು ಕಿರ್ಗಿಸ್ತಾನ್‍ನಲ್ಲಿ. ಹೌದು. ಬರ್ತ್ ಡೇ ಬಂಪ್ಸ್ ನಿಂದ ಚೆನ್ನೈನ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಈ ಬಗ್ಗೆ ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದರು. ಆಗ ಅವರ ಟ್ವೀಟ್‍ಗೆ ಕಿರ್ಗಿಸ್ತಾನ್ ರಾಜಧಾನಿ ಬಿಶ್‍ಕೆಕ್‍ನಲ್ಲಿರುವ ಕಾಲೇಜಿನ ವಿದ್ಯಾರ್ಥಿ ರಘುರಾಜ್ ಸಿಂಗ್ ರೀಟ್ವೀಟ್ ಮಾಡಿದ್ದನು. ಆಗ ಈ ಹುಟ್ಟುಹಬ್ಬದ ವಿಡಿಯೋ 2018ರಲ್ಲಿ ಮಾಡಿದ್ದು. ಇದರಲ್ಲಿ ಬರ್ತ್ ಡೇ ಬಂಪ್ಸ್ ನಿಂದ ಸಾವನ್ನಪ್ಪಿದ್ದಾನೆ ಎನ್ನಾಲಾಗಿದ್ದ ವಿದ್ಯಾರ್ಥಿ ಇನ್ನೂ ಬದುಕಿದ್ದಾನೆ. ಈ ವಿಡಿಯೋವನ್ನು ಡಿಲೀಟ್ ಮಾಡಿ. ಈ ಸುಳ್ಳು ಸುದ್ದಿಯಿಂದ ವಿದ್ಯಾರ್ಥಿ ಬಹಳ ಕಷ್ಟ ಪಡುತ್ತಿದ್ದಾನೆ ಎಂದು ಮನವಿ ಮಾಡಿದ್ದನು. ತದನಂತರ ಸೆಹ್ವಾಗ್ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದರು.

birthday bumps

ಬಳಿಕ ಇಂಡಿಯಾ ಟುಡೇ ಪತ್ರಿಕೆ ಈ ಬಗ್ಗೆ ಸತ್ಯಾಂಶ ಹುಡುಕಿ ಹೊರಟಾಗ ಇದು ಸುಳ್ಳು ಸುದ್ದಿಯೆಂಬುದು ಸ್ಪಷ್ಟವಾಗಿದೆ. ರಘುರಾಜ್ ಸಿಂಗ್ ಪ್ರೋಪೈಲ್ ಹುಡುಕಿದಾಗ ಅದರಲ್ಲಿ ದೀಪಕ್ ಆಂಜನಾ ಎಂಬ ವಿದ್ಯಾರ್ಥಿ ಫೋಟೋವೊಂದನ್ನು ಶೇರ್ ಮಾಡಲಾಗಿತ್ತು. ಮೊದಲು ದೀಪಕ್‍ನನ್ನು ಸಂಪರ್ಕಿಸಿ ಬಳಿಕ ಈ ವಿಡಿಯೋದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಯನ್ನು ಸಂಪರ್ಕಿಸಲಾಯಿತು. ಬಳಿಕ ಈ ಘಟನೆ ಬಗ್ಗೆ ಸ್ವತಃ ಹೊಡೆತ ತಿಂದ ವಿದ್ಯಾರ್ಥಿಯೇ ಸತ್ಯಾಂಶ ತಿಳಿಸಿದ್ದಾನೆ. ಈ ಮೂಲಕ ಈ ಸುದ್ದಿ ಸುಳ್ಳು ಎಂಬುವುದು ಸ್ಪಷ್ಟವಾಗಿದೆ.

birthday bumps 1

ವೈರಲ್ ಆಗಿದ್ದ ಸುದ್ದಿ ಏನು?
ಚೆನ್ನೈನಲ್ಲಿ ಹಾಸ್ಟೆಲ್‍ವೊಂದರಲ್ಲಿ ಯುವಕ ಎರಡು ತಿಂಗಳ ಹಿಂದೆ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದನು. ಈ ವೇಳೆ ಸ್ನೇಹಿತರು ಎಲ್ಲರು ಸೇರಿ ಆತನಿಗೆ ಬರ್ತ್ ಡೇ ಬಂಪ್ಸ್ ಕೊಟ್ಟಿದ್ದರು.

ಬರ್ತ್ ಡೇ ಬಂಪ್ಸ್ ಪಡೆದು ಮನೆಗೆ ಹೋದ ನಂತರ ಆತನಿಗೆ ತೀವ್ರವಾಗಿ ಹೊಟ್ಟೆ ನೋವು ಬಂದಿತ್ತು. ಬಳಿಕ ಆತನ ಪೋಷಕರು ಆತನಿಗೆ ಆಸ್ಪತ್ರೆಗೆ ಸೇರಿಸಿದ್ದರು. ಸ್ನೇಹಿತರು ಬರ್ತ್ ಡೇ ಬಂಪ್ಸ್ ಕೊಟ್ಟಿದ್ದರಿಂದ ಯುವಕನ ಮೆದೋಜೀರಕ ಗ್ರಂಥಿ(ಪ್ಯಾಂಕ್ರಿಯಾಸ್)ಗೆ ಗಂಭೀರವಾಗಿ ಗಾಯಗೊಂಡಿತ್ತು. ಇದರಿಂದ ಯುವಕ ತನ್ನ ಹುಟ್ಟುಹಬ್ಬದಿಂದಲೇ ಮೃತಪಟ್ಟಿದ್ದಾನೆ. ಹುಟ್ಟುಹಬ್ಬದ ಹೆಸರಲ್ಲಿ ಸ್ನೇಹಿತರು ಮನಬಂದಂತೆ ಯುವಕನಿಗೆ ಥಳಿಸಿದ್ದಾರೆ ಎಂಬ ಸುದ್ದಿ ಜೊತೆಗೆ ವಿಡಿಯೋ ವೈರಲ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *