ಕಾಲೇಜು ಮುಂಭಾಗದ ಹೊಂಗೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

Public TV
1 Min Read
ckb suicide collage copy

ಚಿಕ್ಕಬಳ್ಳಾಪುರ: ನಗರದ ಹೊರವಲಯದ ಎಸ್‍ಜೆಸಿಐಟಿ ಕಾಲೇಜು ಮುಂಭಾಗದ ಹೊಂಗೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ.

ಮದನ್ ಗೌಡ(21) ಮೃತ ವಿದ್ಯಾರ್ಥಿ. ಮದನ್ ಎಸ್‍ಜೆಸಿಐಟಿ ಪದವಿ ಕಾಲೇಜಿನಲ್ಲಿ ಎರಡನೇ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು. ದೊಡ್ಡಬಳ್ಳಾಪುರ ತಾಲೂಕಿನ ಶಿವಪುರ ಗ್ರಾಮದ ಮದನ್ ಗೌಡ ಎಸ್‍ಜೆಸಿಐಟಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಕಾಲೇಜು ಮುಂಭಾಗದ ತುಮಕಲಹಳ್ಳಿಯಲ್ಲಿ ಸ್ನೇಹಿತರ ಜೊತೆ ರೂಮ್ ನಲ್ಲಿ ವಾಸವಾಗಿದ್ದನು.

ckb suicide collage 2 copy

ರಾತ್ರಿ ಊಟ ಮಾಡಿ ಹೊರಗಡೆ ಹೋಗಿದ್ದ ಮದನ್ ಗೌಡ ಬೆಳಗ್ಗೆ ಶವವಾಗಿನ ಪತ್ತೆಯಾಗಿದ್ದಾನೆ. ಕಾಲೇಜಿಗೂ ಹಾಗೂ ಮದನ್ ಗೌಡ ವಾಸವಾಗಿದ್ದವ ರೂಂನ ಕೂಗಳತೆ ದೂರದ ತೋಟವೊಂದರಲ್ಲಿ ಹೊಂಗೆ ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಮದನ್ ಗೌಡ ಶವ ಪತ್ತೆಯಾಗಿದೆ.

ನೇಣಿಗೆ ವಿದ್ಯುತ್ ಪ್ರಸರಣಕ್ಕೆ ಬಳಸುವ ವೈರ್ ಗಳನ್ನು ಬಳಸಿದ್ದು, ಇದು ಆತ್ಮಹತ್ಯೆಯೋ, ಇಲ್ಲ ಕೊಲೆಯೋ ಅನುಮಾನ ಮೂಡಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *