– ಸಾಯುವ ಹಿಂದಿನ ದಿನ ಪೋಷಕರ ಜೊತೆ ಮಾತು
– ಹಾಸ್ಟೆಲ್ ರೂಮಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ಚೆನ್ನೈ: ಕಿಲ್ಪಾಕ್ ವೈದ್ಯಕೀಯ ಕಾಲೇಜು ಹಾಸ್ಟೆಲಿನಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾಳೆ.
ಪೆರಂಬೂರು ನಿವಾಸಿ ಆರ್. ಪ್ರತಿಭಾ ಮೃತ ವಿದ್ಯಾರ್ಥಿನಿ. ಮೃತ ವಿದ್ಯಾರ್ಥಿನಿ ಏಪ್ರಿಲ್ 16 ರಿಂದ ಕೊರೊನಾ ವೈರಸ್ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದು, ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದಳು.
Advertisement
ಶುಕ್ರವಾರ ಪ್ರತಿಭಾ ತುಂಬಾ ಸಮಯವಾದರೂ ಹಾಸ್ಟೆಲ್ ರೂಮಿನಿಂದ ಹೊರಗೆ ಬಂದಿರಲಿಲ್ಲ. ಕೊನೆಗೆ ಇತರೆ ವಿದ್ಯಾರ್ಥಿಗಳು ಹೋಗಿ ರೂಮಿನ ಬಾಗಿಲು ಬಡಿದಿದ್ದಾರೆ. ಆದರೆ ಪ್ರತಿಭಾ ಯಾವುದೇ ರೀತಿ ಪ್ರತಿಕ್ರಿಯಿಸಿಲ್ಲ. ನಂತರ ವಿದ್ಯಾರ್ಥಿಗಳು ಅನುಮಾನಗೊಂಡು ವಾರ್ಡನ್‍ಗೆ ಮಾಹಿತಿ ನೀಡಿದ್ದಾರೆ. ವಾರ್ಡನ್ ಬಂದು ರೂಮಿನ ಬಾಗಿಲು ತೆರೆದು ನೋಡಿದಾಗ ಪ್ರತಿಭಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿ ಪ್ರತಿಭಾ ಮೃತಪಟ್ಟಿದ್ದಳು.
Advertisement
Advertisement
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಾವಿನ ಹಿಂದಿನ ದಿನ ಪ್ರತಿಭಾ ವಾಟ್ಸಪ್ ಮೂಲಕ ಪೋಷಕರ ಜೊತೆ ಮಾತನಾಡಿದ್ದಳು. ಅಲ್ಲದೇ ಆಕೆ ದೇಹದ ಮೇಲೆ ಯಾವುದೇ ಗಾಯದ ಗುರುತು ಕೂಡ ಕಂಡುಬಂದಿಲ್ಲ. ಆಕೆ ನಿದ್ದೆ ಮಾಡುತ್ತಿದ್ದಾಗ ಮೃತಪಟ್ಟಿದ್ದಾಳೆ. ಹೀಗಾಗಿ ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.
Advertisement
ಮೃತ ಪ್ರತಿಭಾ ಕೆಲಸ ಮಾಡುತ್ತಿದ್ದ ವಾರ್ಡಿನಲ್ಲಿ ಯಾವುದೇ ಕೋವಿಡ್ ಪ್ರಕರಣ ದಾಖಲಾಗಿರಲಿಲ್ಲ. ಆಕೆಗೂ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.