ವಿಜಯಪುರ: ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬಿಸಿಎಂ ಹಾಸ್ಟೆಲ್‍ನಲ್ಲಿ ನಡೆದಿದೆ.
ಕಡ್ಲೆವಾಡ ಗ್ರಾಮದ ನಿವಾಸಿ ಅಮೃತ ಮಾದರ (22) ನೇಣಿಗೆ ಶರಣಾದ ವಿದ್ಯಾರ್ಥಿ. ಈತ ಸಿಂದಗಿ ತಾಲೂಕಿನ ಎಚ್.ಜಿ. ಕಾಲೇಜಿನಲ್ಲಿ ಪದವಿಯನ್ನು ವಿದ್ಯಾಭ್ಯಾಸ ಮಾಡುತ್ತಿದ್ದು, ಬಿಸಿಎಂ ಹಾಸ್ಟೆಲ್‍ನಲ್ಲಿ ವಾಸವಿದ್ದನು.
Advertisement
Advertisement
ಅಮೃತ ಮಾದರ ಇಂದು ಕಾಲೇಜಿಗೆ ಹೋಗದೆ ಹಾಸ್ಟೆಲ್‍ನಲ್ಲಿಯೇ ಉಳಿದುಕೊಂಡಿದ್ದ. ನಂತರ ಹಾಸ್ಟೆಲ್‍ನ ಸ್ನೇಹಿತರೆಲ್ಲರೂ ಕಾಲೇಜಿಗೆ ಹೋದ ಬಳಿಕ ಯಾರು ಇಲ್ಲದ ಸಮಯದಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
ಘಟನೆ ನಡೆದ ಸ್ಥಳಕ್ಕೆ ಸಿಂದಗಿ ಪೊಲೀಸರು ಬಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.
Advertisement