ಹುಬ್ಬಳ್ಳಿ: ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿನಿ ಚೈತ್ರಾ ಸಂಶಿ ಮನೆಗೆ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಭೇಟಿ ನೀಡಿ ಅವರ ಪಾಲಕರಿಗೆ ಧೈರ್ಯ ತುಂಬಿದ್ದಾರೆ.
Advertisement
ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಯುವತಿ ಚೈತ್ರಾ ಕಳೆದ ಮೂರು ವರ್ಷಗಳಿಂದ ಉಕ್ರೇನ್ ನಲ್ಲಿ ಎಂಬಿಬಿಎಸ್ ಅಭ್ಯಾಸ ಮಾಡುತ್ತಿದ್ದಾರೆ. ಯುದ್ಧ ಭೀತಿಯಿಂದ ದೇಶಕ್ಕೆ ವಾಪಸ್ ಆಗಲು ಟಿಕೆಟ್ ಬುಕ್ ಸಹ ಮಾಡಿದ್ದರು. ಆದರೆ ರಷ್ಯಾದ ಏಕಾಏಕಿ ದಾಳಿಯಿಂದ ವಿಮಾನ ಹಾರಾಟ ನಿಂತಿರುವ ಹಿನ್ನೆಲೆ ಸದ್ಯ ಉಕ್ರೇನ್ ನಲ್ಲಿಯೆ ಚೈತ್ರ ಸಿಲುಕಿದ್ದಾರೆ. ಇದನ್ನೂ ಓದಿ: ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!
Advertisement
Advertisement
ಇದರಿಂದಾಗಿ ಆಕೆ ಕುಟುಂಬ ಆತಂಕಗೊಂಡಿದೆ. ಚೈತ್ರಾಳ ಬರುವಿಕೆಗಾಗಿ ಎದುರು ನೋಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೈತ್ರಾ ಮನೆ ಭೇಟಿ ನೀಡಿ, ಅವರನ್ನು ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ಕರೆತರುವುದಾಗಿ ಭರವಸೆ ನೀಡಿ ಪಾಲಕರಿಗೆ ಧೈರ್ಯ ತುಂಬಿದ್ದಾರೆ.