ಹೈದರಾಬಾದ್: ಅಯ್ಯಪ್ಪ ಮಾಲೆ (Ayyappa Mala) ಧರಿಸಿದ್ದ 6ನೇ ತರಗತಿಯ ವಿದ್ಯಾರ್ಥಿಗೆ (Student) ಶಾಲೆಯಲ್ಲಿ (School) ಪ್ರವೇಶ ನಿರಾಕರಿಸಿರುವ ಘಟನೆ ಬುಧವಾರ ಅಯ್ಯಪ್ಪ ಸ್ವಾಮಿ ಮೊಹ್ನಸ್ ಶಾಲೆಯಲ್ಲಿ ನಡೆದಿದೆ. ಘಟನೆಯ ಬಳಿಕ ಚರ್ಚೆ ಉಂಟಾಗಿ, ಪ್ರತಿಭಟನೆ ನಡೆಸಲಾಗಿದೆ.
ವರದಿಗಳ ಪ್ರಕಾರ ಅಯ್ಯಪ್ಪ ಮಾಲೆ ಧರಿಸಿದ್ದಕ್ಕೆ 6ನೇ ತರಗತಿಯ ವಿದ್ಯಾರ್ಥಿಯನ್ನು ಆತನ ಶಿಕ್ಷಕರು (Teacher) ನಿಂದಿಸಿದ್ದಾರೆ. ಮಾಲಾಧಾರಿಗಳು 41 ದಿನಗಳ ಕಾಲ ವೃತ ನಡೆಸುತ್ತಾರೆ. ಈ ವೇಳೆ ಅವರು ಕಪ್ಪು ಬಟ್ಟೆಯನ್ನು ಧರಿಸುತ್ತಾರೆ. ಆದರೆ ಶಿಕ್ಷಕರು ತರಗತಿಗೆ ಪ್ರವೇಶ ಬೇಕೆಂದರೆ ಕಪ್ಪು ಬಟ್ಟೆ ಹಾಗೂ ತಿಲಕವನ್ನು ತೆಗೆದುಹಾಕುವಂತೆ ವಿದ್ಯಾರ್ಥಿಗೆ ಒತ್ತಾಯಿಸಿದ್ದಾರೆ.
Advertisement
Advertisement
ಈ ಘಟನೆಯಿಂದ ವಿವಾದ ಉಂಟಾಗಿ, ಅಯ್ಯಪ್ಪ ಸ್ವಾಮಿಗಳು ಮೊಹನ್ಸ್ ಶಾಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗೆ ಮಾಲಾಧಾರಣೆ ವೇಳೆ ವೃತಕ್ಕೆ ಅಡ್ಡಿಯಾಗದಂತೆ ಶಾಲಾ ಆವರಣದಲ್ಲಿ ಪ್ರವೇಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್ ಇಲ್ಲದೇ ತ್ರಿಬಲ್ ರೈಡಿಂಗ್ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಮಹಿಳೆ
Advertisement
ಇಂತಹುದೇ ಘಟನೆ ನವೆಂಬರ್ 23ರಂದು ಮಂದಮಾರಿಯ ಸಿಂಗರೇಣಿ ಪ್ರೌಢಶಾಲೆಯಲ್ಲೂ ನಡೆದಿತ್ತು. 10ನೇ ತರಗತಿ ವಿದ್ಯಾರ್ಥಿ ಅಯ್ಯಪ್ಪ ಮಾಲೆ ಧರಿಸಿದ್ದಕ್ಕಾಗಿ ಶಾಲೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಗಿತ್ತು. ವಿದ್ಯಾರ್ಥಿಯ ತಂದೆ ತನ್ನ ಮಗನಿಗೆ ಮಾಲೆ ಧರಿಸಿದ್ದಕ್ಕಾಗಿ ಶಾಲೆಗೆ ಪ್ರವೇಶಿಸಲು ಅನುಮತಿ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
Advertisement
#Hyderabad – Student refused entry to school for wearing Ayyappa Mala, kicks in the school uniform debate
(Video – Reporter Input)#ayyappaswamy #ayyappamala #SchoolUniform https://t.co/7AhBeiMefa pic.twitter.com/FgTcVrFGOT
— Times Now Education (@TimesNowCareers) November 30, 2022
ಈ ಎಲ್ಲಾ ವಿವಾದ ಶಾಲಾ ಸಮವಸ್ತ್ರ ವಿಚಾರದ ಹಿನ್ನೆಲೆಯಲ್ಲಿ ಉಂಟಾಗಿದೆ. ಕರ್ನಾಟಕದಲ್ಲಿ ಪ್ರಾರಂಭವಾದ ಹಿಜಬ್ ವಿವಾದದಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಏಕರೂಪದ ಡ್ರೆಸ್ ಕೋಡ್ ನಿಯಮವನ್ನು ಪಾಲಿಸುವ ಆದೇಶ ಹೊರಡಿಸಲಾಯಿತು. ಇದರಿಂದಾಗಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಹೊರತುಪಡಿಸಿ ಹಿಜಬ್, ಸ್ಕಾರ್ಫ್ ಅಥವಾ ಯಾವುದೇ ಇತರ ಉಡುಗೆಗಳನ್ನು ಧರಿಸುವುದನ್ನು ನಿಷೇಧಿಸಲಾಯಿತು. ಆದರೂ ಈ ಆದೇಶವನ್ನು ಹಲವರು ಪ್ರಶ್ನಿಸಿದ್ದಾರೆ. ಇದು ಅಭಿವ್ಯಕ್ತಿ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗಾಳಿಯಲ್ಲಿ ಗುಂಡುಹಾರಿಸಿ ಹಿಡಿಯಲು ಮುಂದಾದ ಅರಣ್ಯಾಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಗಂಧಚೋರರು