ಸಾಂದರ್ಭಿಕ ಚಿತ್ರ
ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಉತ್ತರ ಹೇಳಿಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸಹಪಾಠಿಗೆ ವಿದ್ಯಾರ್ಥಿಯೊಬ್ಬ ಚಾಕು ಹಾಕಿರುವ ಘಟನೆ ಕಾಮಾಕ್ಷಿಪಾಳ್ಯದ ಶಾಲೆಯ ಬಳಿ ನಡೆದಿದೆ.
Advertisement
ಕಾಮಾಕ್ಷಿಪಾಳ್ಯದಲ್ಲಿರುವ ಮೇರಿಯಾ ಸದನ ಸ್ಕೂಲ್‍ನಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನಿಗೆ ಗೆಳೆಯ ಚಾಕು ಇರಿದಿದ್ದಾನೆ.
Advertisement
ಈಗ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ಸಮಾಜಶಾಸ್ತ್ರ ವಿಷಯದ ಪರೀಕ್ಷೆ ಇತ್ತು. ಒಟ್ಟು 49 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಕೊನೆಯ ಬೆಂಚ್‍ನಲ್ಲಿದ್ದ ವಿದ್ಯಾರ್ಥಿ ಬಳಿ ಬಂದು ಮತ್ತೊಬ್ಬ ವಿದ್ಯಾರ್ಥಿ ಉತ್ತರ ಪತ್ರಿಕೆ ನೀಡು ಎಂದು ಕೇಳಿದ್ದಾನೆ. ಇದನ್ನೂ ಓದಿ: ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ
Advertisement
Advertisement
ಇದಕ್ಕೆ ನಾನು ಇನ್ನೂ ಬರೆಯಬೇಕು ಸದ್ಯಕ್ಕೆ ನೀಡಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿ ಹೇಳಿ ತನ್ನ ಪಾಡಿಗೆ ಸುಮ್ಮನಾಗಿದ್ದಾನೆ. ಬಳಿಕ 11:20ಕ್ಕೆ ಬಂದು ಮತ್ತೊಮ್ಮೆ ಕೇಳಿದಾಗ ವಿದ್ಯಾರ್ಥಿ ಉತ್ತರ ಪ್ರತಿಕೆ ನೀಡಲ್ಲ ಎಂದು ಹೇಳಿದ್ದಾನೆ.
ಉತ್ತರ ಪತ್ರಿಕೆ ನೀಡದ್ದಕ್ಕೆ ಸಿಟ್ಟಾದ ವಿದ್ಯಾರ್ಥಿ ಪರೀಕ್ಷೆ ಮುಗಿದ ಬಳಿಕ ಶಾಲೆಯ ಆವರಣದಲ್ಲೇ ಚೂರಿ ಇರಿದಿದ್ದಾನೆ. ಈ ಘಟನೆ ನಡೆಯುತ್ತಿದ್ದಂತೆ ಶಾಲಾ ಮುಖ್ಯ ಶಿಕ್ಷಕಿ ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆಯೇ ಬಾಲಾರೋಪಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರಿಗೊಪ್ಪಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv