ಮಡಿಕೇರಿ: ತನ್ನನ್ನು ಚುಡಾಯಿಸಿದ ಆಟೋ ಚಾಲಕನಿಗೆ ವಿದ್ಯಾರ್ಥಿನಿ ಚಪ್ಪಲಿ ಏಟು ನೀಡಿರುವ ಘಟನೆ ಕೊಡಗು ಜಿಲ್ಲೆಯ ಅಮ್ಮತ್ತಿ ಪಟ್ಟಣದಲ್ಲಿ ನಡೆದಿದೆ.
ಸಿದ್ದಾಪುರದ ಮುರುಗೇಶ್ ಅಲಿಯಾಸ್ ಡಿಂಗ ವಿದ್ಯಾರ್ಥಿನಿಯನ್ನು ಚುಡಾಯಿಸಿ ಚಪ್ಪಲಿ ಸೇವೆ ಮಾಡಿಸಿಕೊಂಡ ಆಟೋ ಚಾಲಕ. ವಿರಾಜಪೇಟೆಯ ಕಾಲೇಜು ವಿದ್ಯಾರ್ಥಿನಿ ಟ್ಯೂಷನ್ ಮುಗಿಸಿ ಮನೆಯ ಕಡೆಗೆ ಬರುತ್ತಿದ್ದಾಗ ಆಟೋ ಚಾಲಕ ಅನುಚಿತವಾಗಿ ವರ್ತಿಸಿದ್ದಾನೆ. ತಕ್ಷಣ ವಿದ್ಯಾರ್ಥಿನಿಯ ಸಹಾಯಕ್ಕೆ ಬಂದ ಅಮ್ಮತ್ತಿ ಹಿಂದೂ ಜಾಗರಣ ವೇದಿಕೆ ಸದಸ್ಯರು ಆಟೋ ಚಾಲಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಚುಡಾಯಿಸ್ತಿದ್ದ ಯುವಕನಿಗೆ ಕಾಲಿನಲ್ಲಿ ಒದ್ದು, ಚಪ್ಪಲಿಯಿಂದ ಗೂಸಾ ಕೊಟ್ಳು
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ಆಟೋ ಚಾಲಕನಿಗೆ ತನ್ನ ಚಪ್ಪಲಿಯಿಂದ ಹೊಡೆಯುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಕಾಮುಕನಿಗೆ ವಿದ್ಯಾರ್ಥಿನಿಯ ಚಪ್ಪಲಿ ಸೇವೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿನಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಚಪ್ಪಲಿ ಸೇವೆ ಬಳಿಕ ಕಾಮುಕ ಆಟೋ ಚಾಲಕನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಸಿದ್ಧಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv