ಮೈಸೂರು: ಸಿಎಂ ತವರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮೈಸೂರಿಗೆ ಆಗಮಿಸಿದ್ದಾರೆ.
ಮೈಸೂರಿನ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ರಾಹುಲ್ ಗಾಂಧಿ ಸಂವಾದ ಆರಂಭಿಸಿದ್ದು, ಈ ವೇಳೆ ‘ರಾಹುಲ್ ಗಾಂಧಿ ಸರ್’ ಅಂತಾ ಕರೆದ ವಿದ್ಯಾರ್ಥಿನಿಗೆ ನನ್ನನ್ನು ರಾಹುಲ್ ಅಂತಾ ಕರೆಯಿರಿ ಎಂದು ಹೇಳಿದರು ತಕ್ಷಣ ವಿದ್ಯಾರ್ಥಿನಿ ರಾಹುಲ್ ಎಂದು ಸಂಬೋಧಿಸಿದರು.
Advertisement
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ಕನ್ನಡದಲ್ಲಿ ಪ್ರಶ್ನೆ ಕೇಳಿದರು. ಆಗ ಅಧ್ಯಾಪಕರು ಕೇವಲ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಬೇಕು ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ರಾಹುಲ್, ಅವರು ಕನ್ನಡದಲ್ಲೇ ಪ್ರಶ್ನೆ ಕೇಳಲಿ. ನಾನು ಕನ್ನಡದಲ್ಲಿ ತರ್ಜುಮೆ ಮಾಡಿಸಿಕೊಳ್ಳುತ್ತೇನೆ ಎಂದು ಹೇಳಿ ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಯನ್ನು ಬೆಂಬಲಿಸಿದರು.
Advertisement
Advertisement
ವಿದ್ಯಾರ್ಥಿನಿ ಲ್ಯಾಪ್ ಟಾಪ್ ವಿತರಣೆಯಲ್ಲಿ ತಾರತಮ್ಯ ಯಾಕೆ ಮಾಡುತ್ತೀರಾ ಎಂದು ಕೇಳಿದ್ರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿ ಇನ್ನೂ ಒಂದು ತಿಂಗಳಲ್ಲಿ ಪಿಯು ಪಾಸಾದ ಎಲ್ಲರಿಗೂ ಲ್ಯಾಪ್ ಟಾಪ್ ವಿತರಿಸುತ್ತೇವೆ ಎಂದು ಹೇಳಿದರು.
Advertisement
ಬಿಜೆಪಿಯದು ಆರ್‍ಎಸ್‍ಎಸ್ ನದ್ದು ಒಂದು ದೇಶ, ಒಂದು ಐಡಿಯಾ. ಕಾಂಗ್ರೆಸ್ ನದ್ದು ಒಂದು ದೇಶ, ಹಲವು ಐಡಿಯಾ. ಇಲ್ಲಿ ಎಲ್ಲರಿಗೂ ಅವರದೇ ಚಿಂತನೆಗಳು ಇರುತ್ತವೆ. ಅದನ್ನು ನಾವು ಗೌರವಿಸುತ್ತೇವೆ. ಕರ್ನಾಟಕಕ್ಕೂ-ಉತ್ತರಪ್ರದೇಶಕ್ಕೂ ದೊಡ್ಡ ಅಂತರ ಇದೆ. ಕರ್ನಾಟಕದಲ್ಲಿ ಯಾರ ಮೇಲೂ ಯಾವುದನ್ನೂ ಹೇರಿಕೆ ಮಾಡಿಲ್ಲ. ಮೈಸೂರು ಬಹಳ ಒಳ್ಳೆಯ ನಗರ ಎಂದು ರಾಹುಲ್ ಗಾಂಧಿ ಹೇಳಿದ್ರು.
ನೀರವ್ ಮೋದಿ ಥರದ ವ್ಯಕ್ತಿಗಳಿಗೆ ಈ ದೇಶದ ಬ್ಯಾಂಕ್ ಗಳಲ್ಲಿ ಸುಲಭವಾಗಿ ಲೋನ್ ಸಿಗುತ್ತದೆ. ಸಣ್ಣ, ಮಧ್ಯಮ ವರ್ಗದ ಉದ್ಯಮಿಗಳಿಗೆ ಬ್ಯಾಂಕ್ ಗಳಲ್ಲಿ ಸುಲಭವಾಗಿ ಲೋನ್ ಸಿಗಲ್ಲ. ಇದು ದುರಂತವಾಗಿದೆ ಎಂದು ರಾಹುಲ್ ಹೇಳಿದ್ರು. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರಿಗೆ ರಾಜಕೀಯಕ್ಕೆ ಬನ್ನಿ ಎಂದು ಕರೆ ನೀಡಿದ್ರು.
Congress President @RahulGandhi begins the fourth phase of #JanaAashirwadaYatre by seeking blessings at the Chamundeshwari Temple in Mysuru. #RGInMysuru pic.twitter.com/AdWr36mlq7
— Congress (@INCIndia) March 24, 2018
Congress President @RahulGandhi interacted with the students of Maharani's Arts College, Mysuru. #JanaAashirwadaYatre #RGInMysuru pic.twitter.com/wq4vlZzadO
— Congress (@INCIndia) March 24, 2018
LIVE: Congress President Rahul Gandhi addresses a gathering of students in Mysuru. #JanaAashirwadaYatre https://t.co/ZuCo7ikc1e
— Congress (@INCIndia) March 24, 2018