ಮೈಸೂರು: ರಾಜ್ಯದಲ್ಲಿ ಇತ್ಯರ್ಥವಾಗಿರುವ ಅತ್ಯಾಚಾರ ಪ್ರಕರಣಗಳ ಲಿಸ್ಟ್ ಕೊಡಿ ಎಂದು ವಿದ್ಯಾರ್ಥಿನಿ (Student) ಮಹಿಳಾ ದಿನಾಚರಣೆ ಕಾರ್ಯಕ್ರಮದ ವೇದಿಕೆ ಹತ್ತಿ ಪ್ರಶ್ನಿಸಿದ ಘಟನೆ ಮೈಸೂರಲ್ಲಿ ನಡೆದಿದೆ.
ಮೈಸೂರಿನ (Mysuru) ಮಹಾರಾಣಿ ಕಲಾ ಕಾಲೇಜಿನಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸ್ವಾತಿ ದಿಢೀರನೆ ವೇದಿಕೆ ಹತ್ತಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಪ್ರಶ್ನೆ ಮಾಡಿದ್ದಾರೆ. ವಿದ್ಯಾರ್ಥಿನಿ ಪ್ರಶ್ನೆಗೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Choudhary) ಹಾರಿಕೆ ಉತ್ತರ ನೀಡಿ ಎಸ್ಕೇಪ್ ಜಾರಿ ಕೊಂಡಿದ್ದಾರೆ. ಇದನ್ನೂ ಓದಿ: ಸ್ನೇಹಿತರ ಸಂಬಂಧ ಗಂಡ-ಹೆಂಡತಿ ಜಗಳ ಇದ್ದಂತೆ, ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ: ವಿನಯ್ ಗೌಡ
ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಎಷ್ಟು, ಎಷ್ಟು ಪ್ರಕರಣ ಇತ್ಯಾರ್ಥ ಆಗಿದೆ? ನಿಮ್ಮ ಸರ್ಕಾರದಿಂದ ಮಾಹಿತಿ ಕೊಡಿ ಅಂತ ಅಂತಿಮ ಬಿ.ಎ ವಿದ್ಯಾರ್ಥಿನಿ ಸ್ವಾತಿ ಪ್ರಶ್ನಿಸಿದ್ದಾರೆ. ಇದಕ್ಕೆ ನ್ಯಾಯಾಲಯದ ಆದೇಶ ನಾವು ಪ್ರಶ್ನಿಸಲು ಸಾಧ್ಯವಿಲ್ಲ, ಎಲ್ಲದಕ್ಕೂ ಸಾಕ್ಷಿ ಮುಖ್ಯ ಎಂದು ಕಾನೂನು ಹೇಳುತ್ತದೆ. ಯಾವುದೇ ಪ್ರಕರಣವಾದರೂ ಸಾಕ್ಷಿಗಳು ಮುಖ್ಯವಾಗುತ್ತೆ. ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ರೆ, 5 ತಿಂಗಳು ಬೇಕು ರಿಪೋರ್ಟ್ ಬರುವುದಕ್ಕೆ. ಇಲ್ಲಿ ನಮಗೆ ಹಿನ್ನಡೆಯಾಗುತ್ತಿದೆ ಎಂದು ಉತ್ತರಿಸಿ ನಾಗಲಕ್ಷ್ಮಿ ಔಧರಿ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಭಾರತದ ಕಂಪನಿಗಳೇ ಟಾರ್ಗೆಟ್ ಎಂದ ಉಕ್ರೇನ್