CrimeLatestMain PostNational

ಮಗುವಿಗೆ ಜನ್ಮ ನೀಡಿ, ಪೊದೆಯಲ್ಲಿ ಎಸೆದ ವಿದ್ಯಾರ್ಥಿನಿ

ಚೆನ್ನೈ: 11ನೇ ತರಗತಿಯ ಹುಡುಗಿಯೊಬ್ಬಳು ಮಗುವಿಗೆ ಜನ್ಮ ನೀಡಿ, ಆ ಮಗುವನ್ನು ತನ್ನ ಶಾಲೆಯ ಬಳಿ ಇರುವ ಪೊದೆಯಲ್ಲಿ ಬಿಟ್ಟು ಹೋಗಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಭುವನಗಿರಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಪೊದೆಯಲ್ಲಿ ನವಜಾತ ಶಿಶುವಿನ ಶವವನ್ನು ನೋಡಿದ ವಿದ್ಯಾರ್ಥಿಗಳು ಶಾಲಾ ಶಿಕ್ಷಕರಿಗೆ ತಿಳಿಸಿದ್ದಾರೆ. ನಂತರ ಶಾಲೆಯ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದರು.

ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಮಯದಲ್ಲಿ ಶಿಶುವಿನ ಹುಕ್ಕುಳ ಬಳ್ಳಿ ಸರಿಯಾಗಿ ತುಂಡಾಗದ ಕಾರಣ ಶಾಲೆಯ ಆವರಣದಲ್ಲೇ ಮಗುವನ್ನು ಹೆರಿಗೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಾಲೆಯಲ್ಲಿರುವ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಕಾಲೇಜಿನ 11ನೇ ತರಗತಿಯ ವಿದ್ಯಾರ್ಥಿನಿಯು ಬಾತ್‍ರೂಮ್‍ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ನಂತರ ಮಗುವನ್ನು ಶಾಲೆಯ ಬಳಿ ಇರುವ ಪೊದೆ ಬಳಿ ಬಿಟ್ಟು ಮನೆಗೆ ತೆರಳಿದ್ದಾಳೆ ಎಂಬ ವಿಷಯ ತಿಳಿದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ. ಈ ವೇಳೆ 10ನೇ ತರಗತಿಯ ಹುಡುಗನಿಂದ ಆಕೆ ಗರ್ಭಿಣಿಯಾಗಿದ್ದಳು ಎಂಬ ಸತ್ಯ ಹೊರಬಂದಿದೆ. ಇದನ್ನೂ ಓದಿ: ಹಾಲ್ ಟಿಕೆಟ್ ಸಿಗದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಕಾಲೇಜು ವಿದ್ಯಾರ್ಥಿನಿ

ಘಟನೆಗೆ ಸಂಬಂಧಿಸಿ 11ನೇ ತರಗತಿಯ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಡುಗನ ವಿರುದ್ಧ ಪೋಕ್ಸೊ ಕಾಯ್ದೆಯ ಹಲವು ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಘಟನೆಗೆ ಸಂಬಂಧಿಸಿ ಆತನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಹಳಿಯಲ್ಲಿ ರೀಲ್ಸ್ ಹುಚ್ಚಾಟ – ರೈಲು ಗುದ್ದಿದ ರಭಸಕ್ಕೆ ಯುವಕ ಪಲ್ಟಿ

Live Tv 

Leave a Reply

Your email address will not be published.

Back to top button