ಗುರುಗ್ರಾಮ: ಸಿಬಿಎಸ್‍ಎ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಬಹುಮಾನ ಸ್ವೀಕರಿಸಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಬಳಿಕ ಅತ್ಯಾಚಾರವೆಸಗಿದ ಹೀನಾಯ ಘಟನೆ ಹರ್ಯಾಣದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಬುಧವಾರ ನಡೆದಿದ್ದು, ಈಕೆ 12ನೇ ತರಗತಿಯಲ್ಲಿ ಓದುತ್ತಿದ್ದಳು.
ಘಟನೆ ವಿವರ:
ಸೆಕೆಂಡ್ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ರಿವಾರಿಯಲ್ಲಿಯಲ್ಲಿರೋ ತನ್ನ ಗ್ರಾಮಕ್ಕೆ ಕೋಚಿಂಗ್ ಗೆಂದು ತೆರಳುತ್ತಿದ್ದಳು. ಈ ವೇಳೆ 3 ಮಂದಿ ಯುವಕರ ಗುಂಪೊಂದು ಕಾರಿನಲ್ಲಿ ಬಂದು ಆಕೆಯನ್ನು ಅಡ್ಡಹಾಕಿತ್ತು. ಅಲ್ಲದೇ ಬಳಿಕ ವಿದ್ಯಾರ್ಥಿನಿಯನ್ನು ತಮ್ಮ ಕಾರಿನೊಳಗೆ ಎಳೆದು ಹಾಕಿದ್ದಾರೆ. ಹೀಗೆ ಅಪಹರಣ ಮಾಡಿದ ಬಳಿಕ ಕಾರಿನಲ್ಲಿಯೇ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.
Advertisement
Rewari: Woman alleges her daughter was kidnapped&ganag-raped by a group of men y'day,says, "My daughter was rewarded by Modi ji after she topped the CBSE board exams. Modi ji says 'Beti Padho, Beti Bacho', but how? I want justice for my daughter. Police has taken no action yet. " pic.twitter.com/n1t2avUsi1
— ANI (@ANI) September 14, 2018
Advertisement
ವಿದ್ಯಾರ್ಥಿನಿಯನ್ನು ಅಪಹರಣ ಮಾಡಿರೋ ವಿಚಾರವನ್ನು ಸ್ಥಳೀಯ ಕೆಲವರು ಗಮನಿಸಿದ್ದು, ಕೂಡಲೇ ಈ ವಿಚಾರವನ್ನು ಆಕೆಯ ಪೋಷಕರಿಗೆ ರವಾನಿಸಿದ್ದಾರೆ. ಹೀಗಾಗಿ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಲೆಂದು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದ್ರೆ ಅಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
Advertisement
Rewari: Woman alleges her daughter was kidnapped & gang-raped by a group of men yesterday, says, "Modi ji says 'Beti Padho, Beti Bacho', but how? I want justice for my daughter. Police has taken no action yet." pic.twitter.com/L6WsT4F6Gl
— ANI (@ANI) September 14, 2018
Advertisement
ಅಲ್ಲದೇ ಬೇರೆ ಪೊಲೀಸ್ ಠಾಣೆಗೆ ಹೋಗುವಂತೆ ಸೂಚಿಸುವ ಮೂಲಕ ವಿದ್ಯಾರ್ಥಿನಿಯ ಪೋಷಕರನ್ನು ಅಲೆದಾಡಿಸಿದ್ದಾರೆ. ಇತ್ತ ಕೇಸ್ ದಾಖಲು ಮಾಡಲು ಹೋಗುತ್ತಿದ್ದಂತೆಯೇ ಆರೋಪಿಗಳು ಬೆದರಿಕೆಯನ್ನು ಕೂಡ ಹಾಕಿದ್ದಾರೆ ಎಂಬುದಾಗಿ ವರದಿಯಾಗಿದೆ. ಸದ್ಯ ವಿದ್ಯಾರ್ಥಿನಿಯ ತಾಯಿಯ ದೂರಿನಂತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv