ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಮೂಲಕ ಅನೇಕ ಜನರಿಗೆ ಸ್ಪಂದಿಸಿ ನೆರವು ನೀಡುವುದರಿಂದ, ಹಾಗೇ ಇನ್ನೂ ಕೆಲವರಿಗೆ ಟಾಂಗ್ ಕೊಡುವ ಮೂಲಕ ಆಗಾಗ ಸುದ್ದಿಯಾಗ್ತಾನೇ ಇರ್ತಾರೆ. ಇದೀಗ ವ್ಯಕ್ತಿಯೊಬ್ಬ ನಾನು ಮಂಗಳಗ್ರಹದಲ್ಲಿ ಸಿಲುಕಿದ್ದೇನೆ ಅಂತ ಟ್ವೀಟ್ ಮಾಡಿದ್ದು ಅದಕ್ಕೆ ಸುಷ್ಮಾ ಸ್ವರಾಜ್ ನೀಡಿದ ಉತ್ತರ ಇದೀಗ ವೈರಲ್ ಆಗಿದೆ.
ಟ್ವಿಟ್ಟರ್‍ನಲ್ಲಿ 80 ಲಕ್ಷಕ್ಕೂ ಹೆಚ್ಚು ಫಾಲೋವರ್‍ಗಳನ್ನು ಹೊಂದಿರುವ ಸುಷ್ಮಾ ಸ್ವರಾಜ್ ಬಹುತೇಕ ಮಂದಿಯ ಟ್ವೀಟ್‍ಗಳಿಗೆ ಉತ್ತರ ನೀಡುವುದಲ್ಲದೆ ಅವರಿಗೆ ಬೇಕಾದ ನೆರವು ಕೂಡ ನೀಡಿದ್ದಾರೆ. ಆದ್ರೆ ಕೆಲವೊಮ್ಮೆ ಟ್ವಿಟ್ಟರಿಗರು ವಿಚಿತ್ರವಾಗಿ ಟ್ವೀಟ್ ಮಾಡಿ ಸಚಿವೆಯನ್ನ ಟ್ಯಾಗ್ ಮಾಡಿದ್ದೂ ಇದೆ.
Advertisement
ಹೀಗೆ ಕರಣ್ ಎಂಬ ವ್ಯಕ್ತಿ, ನಾನು ಮಂಗಳಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ. ಮಂಗಳಯಾನದ ಮೂಲಕ 987 ದಿನಗಳ ಹಿಂದೆ ಕಳಿಸಿದ್ದ ಊಟ ಇನ್ನೇನು ಖಾಲಿಯಾಗುತ್ತಾ ಬಂದಿದೆ. ಮಂಗಳಯಾನ-2 ಯಾವಾಗ ಕಳಿಸ್ತೀರಾ? ಎಂದು ಪ್ರಶ್ನಿಸಿ ಸುಷ್ಮಾ ಸ್ವರಾಜ್ ಅವರ ಖಾತೆಗೆ ಹಾಗೂ ಇಸ್ರೋ ಖಾತೆಗೆ ಟ್ಯಾಗ್ ಮಾಡಿದ್ದಾರೆ.
Advertisement
ಇದಕ್ಕೆ ಹಾಸ್ಯಾಸ್ಪದವಾಗಿಯೇ ಉತ್ತರ ನೀಡಿರುವ ಸುಷ್ಮಾ ಸ್ವರಾಜ್, ನೀವು ಮಂಗಳಗ್ರಹದಲ್ಲಿ ಸಿಲುಕಿದ್ರೂ ಸರಿ, ಭಾರತೀಯ ರಾಯಭಾರಿಗಳು ನಿಮಗೆ ಸಹಾಯ ಮಾಡಲು ಅಲ್ಲಿರ್ತಾರೆ ಎಂದಿದ್ದಾರೆ.
Advertisement
https://twitter.com/ksainiamd/status/872614454923546625
Advertisement
Even if you are stuck on the Mars, Indian Embassy there will help you. https://t.co/Smg1oXKZXD
— Sushma Swaraj (@SushmaSwaraj) June 8, 2017
ಇಂದು ಬೆಳಿಗ್ಗೆ ಸುಷ್ಮಾ ಸ್ವರಾಜ್ ಮಾಡಿರುವ ಈ ಟ್ವೀಟ್ ಈಗಾಗಲೇ ವೈರಲ್ ಆಗಿದ್ದು, ಅನೇಕ ಟ್ವಿಟ್ಟರಿಗರು ಈ ಉತ್ತರವನ್ನ ಶ್ಲಾಘಿಸಿದ್ದಾರೆ.
2013ರ ನವೆಂಬರ್‍ನಲ್ಲಿ ಭಾರತ ಮಂಗಳಯಾನ ಉಪಗ್ರಹವನ್ನು ಉಡಾವಣೆ ಮಾಡಿತ್ತು.
And Mam Sushma Ji will continue to bedazzle us all with her wit, passion & energy to serve Indians wherever they are. You're an inspiration
— Monica Jasuja (@jasuja) June 8, 2017
bravo ! that called celestial diplomacy !!
— vimal yogi tiwari (@yogivimal) June 8, 2017
There are new lessons in commitment to work, sincerity & ability to delight the served I draw from you daily.
— Sushil Kedia (@sushilkedia) June 8, 2017
Sushma ji you are an inspiration on how to maintain your sense of humor even in some of the most difficult jobs on this earth.
— kusum (@kusum_l) June 8, 2017
https://twitter.com/akelabhartiya/status/872664173104177152