ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದು ಬೀಗುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ನಾಡಿನ ಸಾಕಷ್ಟು ದಿಗ್ಗಜರು ರಿಕಿ ಕೇಜ್‌ಗೆ ಅಭಿನಂದಿಸಿದ್ದರು. ಅದರಲ್ಲೂ ಕನ್ನಡದ ನೆಲೆ ರಿಕಿ ಕೇಜ್ ಬಗ್ಗೆ ಗುಣಗಾನ ಕೂಡ ಮಾಡಿತ್ತು. ಆದರೆ ಎರಡು ತಿಂಗಳಿಂದ ಗ್ರ್ಯಾಮಿ ಅವಾರ್ಡ್ ಅವರ ಕೈಗೆ ಬಂದಿರಲಿಲ್ಲ ಎನ್ನುವುದು ಅಚ್ಚರಿ ಸಂಗತಿ. ಇದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್
Advertisement
ಗ್ರ್ಯಾಮಿ ಪ್ರಶಸ್ತಿ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕರ್ನಾಟಕದ ಸಾಕಷ್ಟು ಗಣ್ಯರು ರಿಕಿಯನ್ನು ಅಭಿನಂದಿಸಿದ್ದರು. ಆದರೆ ಎರಡು ತಿಂಗಳುಗಳ ಕಾಲ ಗ್ರ್ಯಾಮಿ ಪದಕವು ಬೆಂಗಳೂರಿನ ಕಸ್ಟಮ್ಸ್ ಇಲಾಖೆಯಲ್ಲಿ ಸಿಲುಕಿಕೊಂಡಿತ್ತು ಎನ್ನುವುದು ನೋವಿನ ಸಂಗತಿಯಾಗಿತ್ತು. ಹಾಗಾಗಿ ಅವರು ಇಂದು ಈ ಕುರಿತು ಟ್ವೀಟ್ ಮಾಡಿದ್ದರು. ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲೇ ಆಗಿರುವ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಅವರು ಮತ್ತೆ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
Advertisement
Advertisement
ಮುಂಜಾನೆ ಟ್ವೀಟ್ ಮಾಡಿದ್ದ ರಿಕಿ, ‘ನನಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಆದರೆ, ಮೆಡಲ್ 2 ತಿಂಗಳ ಕಾಲದಿಂದ ಬೆಂಗಳೂರು ಕಸ್ಟಮ್ಸ್‌ನಲ್ಲಿದೆ. ಸಂಬಂಧಪಟ್ಟವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ’ ಎಂದು ಬರೆದು, ಸಂಬಂಧಪಟ್ಟ ಸಂಸ್ಥೆಗಳಿಗೆ ಟ್ಯಾಗ್ ಮಾಡಿದ್ದರು. ಟ್ವೀಟ್ ಮಾಡುತ್ತಿದ್ದಂತೆಯೇ ಕಸ್ಟಮ್ಸ್ ಅಧಿಕಾರಿಗಳನ್ನು ನೆಟ್ಟಿಗರು ತರಾಟೆಗೆ ತಗೆದುಕೊಂಡರು. ಆನಂತರ ಸಮಸ್ಯೆ ಸರಿ ಹೋಗಿದೆ ಎಂದು ರಿಕಿ ಮರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ
Advertisement
ಕಸ್ಟಮ್ಸ್ ಅಧಿಕಾರಿಗಳಿಗೆ ಅದರಲ್ಲಿ ಗ್ರ್ಯಾಮಿ ಅವಾರ್ಡ್ ಇರುವುದು ಗೊತ್ತಿರದೇ ಇರುವ ಕಾರಣಕ್ಕಾಗಿ ತಮ್ಮ ನಿಯಮಗಳನ್ನು ಅನುಸರಿಸಿದ್ದಾರೆ. ಈಗ ಪ್ರಕ್ರಿಯೆ ಎಲ್ಲ ಮುಗಿದಿದೆ. ಹಾಗಾಗಿ ಶೀಘ್ರದಲ್ಲೇ ಪದಕಗಳು ಕೈ ಸೇರಲಿವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.