ಬೆಂಗಳೂರು: ವಕ್ಫ್ ಕಾನೂನು ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತಿಳಿಸಿದರು.
ವಿಧಾನಸೌಧದಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ವಕ್ಫ್ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಎರಡನೇ ಹಂತದ ಹೋರಾಟದ ಬಗ್ಗೆ ನಾಳೆಯ ಸಭೆಯಲ್ಲಿ ಚರ್ಚಿಸಿ ಹೋರಾಟದ ರೂಪುರೇಷೆಗಳನ್ನ ರೂಪಿಸುತ್ತೇವೆ ಎಂದರು.ಇದನ್ನೂ ಓದಿ: ಮನು ಭಾಕರ್, ಗುಕೇಶ್‌ಗೆ ಖೇಲ್ ರತ್ನ ಘೋಷಣೆ
Advertisement
Advertisement
ನಮ್ಮ ಹೋರಾಟಕ್ಕೆ ಎಲ್ಲರನ್ನು ಸ್ವಾಗತ ಮಾಡುತ್ತೇವೆ. ನಮ್ಮದು ಜನಪರ ಆಂದೋಲನ. ವಕ್ಫ್ ಆಸ್ತಿ ಎಂದು ಅವರು 3 ಪಾಕಿಸ್ತಾನ ಮಾಡುವ ಅಷ್ಟು ಜಾಗವನ್ನು ಕ್ರೈಮ್ ಮಾಡುತ್ತಿದ್ದಾರೆ. ನಮ್ಮ ಹೋರಾಟದಿಂದಲೇ ವಕ್ಫ್ ಆಂದೋಲನ ಇಡೀ ದೇಶದಲ್ಲಿ ಅಗ್ತಿದೆ. ವಕ್ಫ್ ಕಾನೂನು ರದ್ದು ಮಾಡಬೇಕು ಎಂಬ ಉದ್ದೇಶದಿಂದ ನಾವು ಹೋರಾಟ ಮಾಡುತ್ತಿದ್ದೇವೆ. ವಕ್ಫ್ ಆಸ್ತಿ ಇದು ನಮ್ಮ ಆಸ್ತಿ, ಹಿಂದೂಗಳ ಆಸ್ತಿ ಎಂದು ತಿಳಿಸಿದರು.
Advertisement
2 ಮತ್ತು 3 ಹಂತದ ವಕ್ಫ್ ಹೋರಾಟ ಮುಗಿದ ಮೇಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಭೇಟಿ ಮಾಡುತ್ತೇವೆ. ವಕ್ಫ್ ಕಾನೂನು ರದ್ದು ಮಾಡುವಂತೆ ಮೋದಿ ಅವರಿಗೆ ಮನವಿ ಮಾಡುತ್ತೇವೆ. ವಕ್ಫ್ ಕಾನೂನು ರದ್ದಾಗಬೇಕು. ಇದು ನಮ್ಮ ಹೋರಾಟ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ನಿಖಿಲ್‌ಗೆ ರಾಜ್ಯಾಧ್ಯಕ್ಷ ಪಟ್ಟ – ಜೆಡಿಎಸ್ ಹಿರಿಯ ನಾಯಕರ ಅಸಮಾಧಾನ
Advertisement