ನವದೆಹಲಿ: ರೈತರು ಎಷ್ಟು ಬಲಿಷ್ಠರಾಗುತ್ತಾ ಹೋಗುತ್ತಾರೋ, ಹಾಗೇ ನವ ಭಾರತವು ಹೆಚ್ಚು ಸಮೃದ್ಧವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಮತ್ತು ಇತರೆ ಕೃಷಿ ಸಂಬಂಧಿತ ಯೋಜನೆಗಳ ಕುರಿತು ಟ್ವೀಟ್ ಮಾಡಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಮತ್ತು ಇತರ ಕೃಷಿ ಸಂಬಂಧಿತ ಯೋಜನೆಗಳು ಕೋಟಿಗಟ್ಟಲೆ ಉಳುಮೆದಾರರಿಗೆ ಹೊಸ ಶಕ್ತಿಯನ್ನು ನೀಡುತ್ತಿವೆ ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಿದರು.
हमारे किसान भाई-बहनों पर देश को गर्व है। ये जितना सशक्त होंगे, नया भारत भी उतना ही समृद्ध होगा। मुझे खुशी है कि पीएम किसान सम्मान निधि और कृषि से जुड़ी अन्य योजनाएं देश के करोड़ों किसानों को नई ताकत दे रही हैं। pic.twitter.com/xMSrBrbLT5
— Narendra Modi (@narendramodi) April 10, 2022
ಟ್ವೀಟ್‍ನಲ್ಲಿ ಏನಿದೆ?: ನಮ್ಮ ರೈತ ಸಹೋದರ ಸಹೋದರಿಯರ ಬಗ್ಗೆ ದೇಶ ಹೆಮ್ಮೆಪಡುತ್ತದೆ. ಅವರು ಬಲಿಷ್ಠರಾಗಿದಷ್ಟು, ನವ ಭಾರತವು ಹೆಚ್ಚು ಸಮೃದ್ಧವಾಗಿರುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕೃಷಿಗೆ ಸಂಬಂಧಿಸಿದ ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿಯನ್ನು ನೀಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಸಂವಿಧಾನ ಪಾಲನೆ ಮಾಡದವರಿಗೆ ಭಾರತದಲ್ಲಿ ಇರಲು ಹಕ್ಕಿಲ್ಲ: ಅಭಯ್ ಪಾಟೀಲ್
11.3 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 1.82 ಲಕ್ಷ ಕೋಟಿ ರೂ.ವನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದು ಹೇಳುವ ಗ್ರಾಫಿಕ್ ಅನ್ನು ಪ್ರಧಾನಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೇಶದ ವೈವಿಧ್ಯತೆಯನ್ನು ಗುರುತಿಸುವುದು ಸಂಘ ಪರಿವಾರದ ಅಜೆಂಡಾವಲ್ಲ : ಪಿಣರಾಯಿ