ತುಮಕೂರು: ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಿ.ಡಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಧ್ಯಯನ ಪೀಠ ಸ್ಥಾಪಿಸದಂತೆ ವಿವಿಧ ಸಂಘಟನೆಗಳ ಮುಖಂಡರು ವಿವಿ ಕುಲಪತಿಗೆ ಮನವಿ ಸಲ್ಲಿಸಿದ್ದಾರೆ.
ಸಾವರ್ಕರ್ ಅಭಿಮಾನಿಗಳು ಬೇಕಿದ್ರೆ ಅವರ ಫೋಟೋವನ್ನು ಅವರವರ ಮನೆಯಲ್ಲಿ ಹಾಕಿಕೊಳ್ಳಲಿ, ಅದರ ಹೊರತಾಗಿ ವಿವಿಯಲ್ಲಿ ಪೀಠ ಸ್ಥಾಪನೆ ಮಾಡುವುದು ಬೇಡ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಮುಂದಾದ ತುಮಕೂರು ವಿವಿ
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಾವರ್ಕರ್ ಪೀಠ ಮಾಡುತ್ತೇವೆ ಎಂದು ವಿಶ್ವವಿದ್ಯಾನಿಲಯವನ್ನು ರಾಜಕಾರಣದ ಕೇಂದ್ರ ಮಾಡಲು ಹೊರಟಿರುವ ವಿವಿಯ ನಡೆ ನಿಜಕ್ಕೂ ನಾಚಿಕೆ ತರುವಂತದ್ದು. ವಿವಿಯಲ್ಲಿ ಈಗಾಗಲೇ 16 ಅಧ್ಯಯನ ಪೀಠಗಳಿವೆ. ಅವುಗಳನ್ನೇ ನಡೆಸಲು ಅನುದಾನ ಇಲ್ಲ, ಪೀಠೋಪಕರಣಗಳಿಲ್ಲ, ಇನ್ನೂ ಹೊಸ ಕ್ಯಾಂಪಸ್ ಕಟ್ಟಲು ಆಗಿಲಗಲ. ಇಂತಹ ಸಂಧರ್ಭದಲ್ಲಿ ರಾಜಕೀಯ ತೇವಲಿಗೆ ಪೀಠ ಮಾಡುತ್ತಿರುವುದು ವಿಶ್ವವಿದ್ಯಾನಿಲಯದ ಬೌದ್ಧಿಕ ದಾರಿದ್ರ್ಯ, ಹಾಗಾಗಿ ಪೀಠ ಸ್ಥಾಪನೆ ಪೀಠ ಸ್ಥಾಪನೆ ಮಾಡುವುದು ಬೇಡವೆಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದಾರೆ.