– ಸಿಜೇರಿಯನ್‍ಗೆ ವೈದ್ಯರ ವಿಳಂಬ ಆರೋಪ
ಬೆಂಗಳೂರು: ನಗರದ ಕೆಸಿ ಜನರಲ್ (KC General) ಅಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಜಗತ್ತಿಗೆ ಬರುವ ಮುಂಚೆಯೇ ಕಂದಮ್ಮ ಕಣ್ಣು ಮುಚ್ಚಿದ ಘಟನೆಯೊಂದು ನಡೆದಿದೆ.
Advertisement
ಚೊಕ್ಕಸಂದ್ರದ ದೇವಿಕಾ ಎಂಬವರಿಗೆ 9 ತಿಂಗಳು ಭರ್ತಿಯಾಗಿ 12 ದಿನದ ಬಳಿಕ ಆಸ್ಪತ್ರೆ ವೈದ್ಯರು ಡೆಲಿವರಿಗೆ ಡೇಟ್ ಕೊಟ್ಟರು. ಆದರೆ ಡೇಟ್ ಮೀರಿದೆ ಸಿಜೇರಿಯನ್ ಮಾಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದರೂ ವೈದ್ಯರು ಒಪ್ಪದೇ ನಾರ್ಮಲ್ ಗೆ ರೆಡಿ ಮಾಡಿದ್ದಾರೆ. ಬಳಿಕ ನಾರ್ಮಲ್ ಆಗಲ್ಲ ಸಿಜೇರಿಯನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಕೊನೆಗೆ ಮಗು ಗಲೀಜು ನೀರು ಕುಡಿದಾಗಿದ್ದು, ಮಗು ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಇದಾದ ಬಳಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಗಲಾಟೆ ನಡೆಸಿದ್ದು, ಆಕ್ರೋಶ ಹೊರಹಾಕಿ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ಮಗು ಸತ್ತು ಹೋದ ಮೇಲೆಯೂ ದುಡ್ಡು ಕೊಡಿ ಎಂದು ಆಸ್ಪತ್ರೆಯವರು ಕೇಳಿದ್ದಾರೆ. ಭಾನುವಾರ 10 ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಸಂಜೆ 7 ಗಂಟೆಯವರೆಗೆ ಆಸ್ಪತ್ರೆಯವರು ಕಾಯಿಸಿದ್ದಾರೆ. ಒಂದು ವಾರದ ಹಿಂದೆ ನಾರ್ಮಲ್ ಆಗಲ್ಲ, ಸಿಜೇರಿಯನ್ ಆಗುತ್ತೆ ಎಂದಿದ್ದರು. ಆದರೆ ನಿನ್ನೆ ಬಂದ ಬಳಿಕ ನಾರ್ಮಲ್ ಆಗುತ್ತೆ ಎಂದು ಅಸ್ಪತ್ರೆಯವರು ಹೇಳಿದ್ದಾರೆ. ಕುಟುಂಬಸ್ಥರು ದಿನ ತುಂಬಿದೆ ಕಾಯಬೇಡಿ ಅಂದ್ರೂ ಆಸ್ಪತ್ರೆಯವರು ಕೇಳಲಿಲ್ಲ ಎಂದು ದೇವಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಲಂಚ ಲಂಚ ಅಂತಾ ಸಾಯ್ತಾ ಇದ್ದಾರೆ. ವೈದ್ಯರನ್ನು ಹೊರಗೆ ಕರೆಸುವಂತೆ ಗಲಾಟೆ ಮಾಡಿ ಆಕ್ರೋಶ ಹೊರಹಾಕಿದ ಕುಟುಂಬಸ್ಥರು, ಆಸ್ಪತ್ರೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ವೈದ್ಯರನ್ನು ಸಸ್ಪೆಂಡ್ ಮಾಡಿ ಅಂತಾ ಕಿಡಿಕಾರಿದ್ದಾರೆ.
Advertisement
ಇತ್ತ ಈ ಸಂಬಂಧ ಜನರಲ್ ಮೆಡಿಕಲ್ ಆಫೀಸರ್ ಡಾ ಮೋಹನ್ ಕೆಸಿ ಪ್ರತಿಕ್ರಿಯಿಸಿ, ಡಾ. ವಿಜಯಲಕ್ಷ್ಮಿ ವೈದ್ಯೆ ಇವರನ್ನು ನೋಡುತ್ತಿದ್ರು. ಡಿಸೆಂಬರ್ 10ಕ್ಕೆ ಡೆಲಿವರಿ ಡೇಟ್ ಇತ್ತು. ಸಿಜೇರಿಯನ್ ಅಗತ್ಯವಿಲ್ಲ ಅಂತಾ ನಿರ್ಧಾರಕ್ಕೆ ಬಂದಿದ್ರು. ಆದರೆ ನಾರ್ಮಲ್ ಆಗದೇ ಇರೋದ್ರಿಂದ ಸಿಜೇರಿಯನ್ ಮಾಡಿದ್ದಾರೆ. ಹಾರ್ಟ್ ಬೀಟ್ ಕಡಿಮೆ ಇತ್ತು, ಎನ್ ಐ ಸಿಯು ಗೆ ಶಿಫ್ಟ್ ಮಾಡಿದ್ದಾರೆ. ವೈದ್ಯೆ ನನ್ನ ಕಡೆಯಿಂದ ತಪ್ಪಾಗಿಲ್ಲ ಅಂತಾ ಹೇಳಿದ್ದಾರೆ. ಆದರೆ ವೈದ್ಯೆಯ ನಿರ್ಲಕ್ಷ್ಯ ಇದ್ರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಆಂತರಿಕ ತನಿಖೆ ಮಾಡುತ್ತೇವೆ. ವರದಿ ತಯಾರಿ ಮಾಡಿದ ಬಳಿಕ ಕೇಸ್ ಶೀಟ್ ತಗೊಂಡು ನಿರ್ಧಾರ ಮಾಡ್ತೇವೆ. ವೈದ್ಯರ ನಿರ್ಲಕ್ಷ್ಯ ದಾಖಲೆಯಲ್ಲಿ ಬಂದ್ರೇ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ. ದೂರು ಕೊಟ್ಟ ಮೇಲೆ ತನಿಖೆ ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮಲ್ಲೇಶ್ವರ ಠಾಣೆಯಲ್ಲಿ ಕುಟುಂಬಸ್ಥರು ವೈದ್ಯೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.