ರಾಯಪುರ: ದನದ ಮಾಂಸ (Beef Meat) ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ನಡುರಸ್ತೆಯಲ್ಲೇ ವಿವಸ್ತ್ರಗೊಳಿಸಿ ಥಳಿಸಿರುವ ಆಘಾತಕಾರಿ ಘಟನೆ ಛತ್ತಿಸ್‌ಗಢದ (Chhattisgarh) ಬಿಸ್ಲಾಪುರದಲ್ಲಿ ನಡೆದಿದೆ.
ದನದ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿದ್ದಂತೆ ಹಿಂಬದಿಯಿಂದ ಥಳಿಸಲು ಪ್ರಾರಂಭಿಸಿದ್ದಾರೆ. ಹಲವರು ಇದನ್ನು ತಮ್ಮ ಮೊಬೈಲ್ (Mobile) ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಇದನ್ನೂ ಓದಿ: ದಕ್ಷಿಣ ಕೊರಿಯಾದ ಹ್ಯಾಲೋವೀನ್ ದುರಂತದಲ್ಲಿ ಖ್ಯಾತ ನಟ, ಗಾಯಕ ಸಾವು
Advertisement
Advertisement
ಘಟನೆಗೆ ಸಂಬಂಧಿಸಿದಂತೆ ನರಸಿಂಗ್ ದಾಸ್ (50) ಮತ್ತು ರಾಮನಿವಾಸ್ ಮೆಹರ್ (52) ಆರೋಪಿಗಳಿಂದ 33 ಕೆಜಿ ಗೋ ಮಾಂಸ ವಶಪಡಿಸಿಕೊಂಡಿರುವುದಾಗಿ ಪೊಲೀಸರು (Police) ತಿಳಿಸಿದ್ದಾರೆ. ಬಳಿಕ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪಶುವೈದ್ಯರಿಂದ ಮಾಂಸ ಪರೀಕ್ಷೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ
Advertisement
Advertisement
ಆರೋಪಿಗಳಿಬ್ಬರು ಗೋಣಿಚೀಲದಲ್ಲಿ ವಸ್ತುಗಳನ್ನು ತುಂಬಿಕೊಂಡು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಥಳೀಯರು ಅನುಮಾನಗೊಂಡು ಪರಿಶೀಲಿಸಿದಾಗ ಗೋಮಾಂಸ ಇರುವುದು ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಕೆಲವರು ಅವರನ್ನು ವಿವಸ್ತ್ರಗೊಳಿಸಿ, ರಸ್ತೆಯಲ್ಲೇ ಬೆಲ್ಟ್ನಿಂದ ಥಳಿಸಲು ಪ್ರಾರಂಭಿಸಿದ್ದಾರೆ. ನಂತರ ಪೊಲೀಸರಿಗೆ (Chhattisgarh Police) ಮಾಹಿತಿ ನೀಡಲಾಗಿದ್ದು, ಇಬ್ಬರು ಆರೋಪಿಗಳೊಂದಿಗೆ 33 ಕೆಜಿ ಗೋಮಾಂಸವನ್ನೂ ವಶಪಡಿಸಿಕೊಂಡಿದ್ದಾರೆ.
ಪಶುವೈದ್ಯರಿಂದ ಇನ್ನೂ ವರದಿ ಬಂದಿಲ್ಲವಾದ್ದರಿಂದ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಅಧಿಕಾರಿಗಳೂ ಪ್ರತಿಕ್ರಿಯೆ ನೀಡಿಲ್ಲ.