ಬೆಂಗಳೂರು: ಮೈಕ್ರೋ ಫೈನಾನ್ಸ್ (Micro Finance) ಕಿರುಕುಳ ತಡೆಗೆ ಕಠಿಣ ಕಾನೂನು ಜಾರಿ ಮಾಡುವುದಾಗಿ ಗೃಹ ಸಚಿವ ಪರಮೇಶ್ವರ್ (Parameshwar) ತಿಳಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೈಕ್ರೋ ಫೈನಾನ್ಸ್‌ನಿಂದ ತೊಂದರೆ ಆಗುತ್ತಿದೆ ಎಂದು ರಾಜ್ಯಾದ್ಯಂತ ದೂರು ದಾಖಲಾಗಿದೆ. ಮೈಕ್ರೋ ಫೈನಾನ್ಸ್ ಸಂಬಂಧ ಈಗ ಇರುವ ನಿಯಮಗಳು ಅಷ್ಟು ಕಠಿಣವಾಗಿ ಇಲ್ಲ ಅಂತ ನಮ್ಮ ಗಮನಕ್ಕೆ ಬಂದಿದೆ ಎಂದರು.
Advertisement
ಬ್ಯಾಂಕ್ ನಿಯಮಗಳ (Bank Ruls) ಪ್ರಕಾರ ಹಣ ರಿಕವರಿ ಮಾಡಲು ಕಾನೂನು ಇದೆ. ಅದೇ ರೀತಿ ಅವರ ರಕ್ಷಣೆ ಮಾಡಲು ಕಾನೂನು ಇದೆ. ಈಗ ಇರುವ ಕಾನೂನು ಸಾಕಾಗುತ್ತಿಲ್ಲ. ಕಠಿಣವಾಗಿ ಇಲ್ಲ ಅಂತ ನಮ್ಮ ಇಲಾಖೆಯಿಂದ ಅನೇಕ ವರದಿಗಳು ಬಂದಿವೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಮಾಡೋ ಅಗತ್ಯವಿದೆ. ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣಕ್ಕೆ ಕಠಿಣ ಕಾನೂನು ತರುತ್ತದೆ ಅಂತ ತಿಳಿಸಿದರು.
Advertisement
Advertisement
ಸಾಲ ತಗೊಂಡು ಸಾಲ ವಾಪಸ್ ಕಟ್ಟದೇ ಹೋದ್ರೆ ಅವರು ಸಾಲಗಾರರ ಬಳಿಯೇ ಕ್ರಮ ತೆಗೆದುಕೊಳ್ಳಬಹುದು ಅಂತ ಫೈನಾನ್ಸ್ ಅವರು ಸಹಿ ಹಾಕಿಸಿಕೊಂಡಿರುತ್ತಾರೆ. ಸಾಲ ತಗೋಳೋವಾಗ ಹತ್ತಾರು ಕಡೆ ಸಹಿ ತೆಗೆದುಕೊಂಡಿರುತ್ತಾರೆ. ಆ ಸಹಿ ಯಾಕೆ ಮಾಡಿರುತ್ತೇವೆ ಅಂತಾನೂ ಗ್ರಾಹಕರಿಗೆ ಗೊತ್ತಿರೋದಿಲ್ಲ .ಅದು ಕಮಿಟ್ ಮೆಂಟ್ ಆಗಿರುತ್ತದೆ. ಆ ಆಧಾರದಲ್ಲಿ ಮನೆ ರೇಡ್ ಮಾಡೋದು, ಮನೆ ಸೀಜ್ ಮಾಡೋದು ಎಲ್ಲಾ ಮಾಡ್ತಿದ್ದಾರೆ.ಇದಕ್ಕೆ ಕಾನೂನಿನಲ್ಲೆ ಪರಿಹಾರ ಕಂಡುಹಿಡಿಯಬೇಕು ಎಂದರು. ಇದನ್ನೂ ಓದಿ: ಟೀ ಮಾರುವವನ ಯಡವಟ್ಟಿಗೆ 13 ಮಂದಿ ಬಲಿ
Advertisement
ಈಗಾಗಲೇ ಕಾನೂನು ಸಚಿವರು ಅದರ ಬಗ್ಗೆ ಗಮನಹರಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಕಾನೂನು ಬದಲಾವಣೆ ಮಾಡಿ ಕಠಿಣ ನಿಯಮ ಜಾರಿ ಮಾಡುವುದಾಗಿ ಹೇಳಿದ್ದಾರೆ. ನಾಳೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಚರ್ಚೆ ಮಾಡಿ ಏನೆಲ್ಲ ಕೇಸ್ ಗಳು ಅಗಿವೆ. ಕಾನೂನು ಕಠಿಣವಾಗಿ ಇಲ್ಲ ಅನ್ನೋದನ್ನು ಪರಿಶೀಲನೆ ಮಾಡ್ತೀವಿ. ಈಗ ಆಗಿರುವ ಕೇಸ್ ಗಳ ಬಗ್ಗೆಯೂ ಸಭೆಯಲ್ಲಿ ಪರಿಶೀಲನೆ ಮಾಡುತ್ತೇವೆ ಅಂತ ತಿಳಿಸಿದರು.