ಲಕ್ನೋ: ರೈಲ್ವೇ ಇಲಾಖೆ (Railway Department) ಯಲ್ಲಿ ಕೆಲಸ ಸಿಗುತ್ತಿಲ್ಲವೆಂದು ಮನನೊಂದ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶ (Uttarapradesh) ದ ಲಕ್ನೋದಲ್ಲಿ ನಡೆದಿದೆ.
ನಾನು ಎಷ್ಟೇ ಪ್ರಯತ್ನ ಮಾಡಿದರೂ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗುತ್ತಿಲ್ಲ. ಹೀಗಾಗಿ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತಿದೇನೆ. ನನ್ನ ಹೆತ್ತವರು ತುಂಬಾ ಒಳ್ಳೆಯವರು. ಪ್ರತಿಯೊಬ್ಬರೂ ನನ್ನಂತಹ ತಂದೆ-ತಾಯಿಗಳನ್ನು ಹೊಂದಿರಬೇಕೆಂದು ನಾನು ಬಯಸುತ್ತೇನೆ. ನನ್ನ ಸಾವಿಗೆ ನಾನೇ ಹೊಣೆ ಎಂದು ಯುವಕ ಬರೆದುಕೊಂಡಿದ್ದಾನೆ.
Advertisement
Advertisement
ಹನುಮಾನ್ ರಾವತ್ ರೈಲ್ವೆ ಇಲಾಖೆಯಿಂದ ನಿವೃತ್ತಿ ಹೊಂದಿದ್ದರು. ಆ ಬಳಿಕದಿಂದ ಕಿರಿಯ ಮಗನ ಜೊತೆ ಲಕ್ನೋದ ಕರಣ್ಪುರ ಗ್ರಾಮದಲ್ಲಿ ನೆಲೆಸಿದ್ದರು. ಇವರ ಕಿರಿಯ ಮಗ ಸಂದೀಪ್ ರಾವತ್ ಸೈನ್ಯದಲ್ಲಿದ್ದು, ಇನ್ನೊಬ್ಬ ಮಗ ದಿಲೀಪ್ ರಾವತ್ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದನು. ಇದನ್ನೂ ಓದಿ: ಬೀದಿನಾಯಿಗೆ ತಿಂಡಿ ನೀಡಲು ಹೋಗಿದ್ದ ಯುವತಿಯ ಮೇಲೆ ಹರಿದ ಕಾರು – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Advertisement
ಆದರೆ ಇದೀಗ ರೈಲ್ವೆಯಲ್ಲಿ ಕೆಲಸ ಸಿಕ್ಕಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮೃತದೇಹವನ್ನು ಮರಣೀತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದೆ.
Advertisement
ಮಗನ ಆತ್ಮಹತ್ಯೆ ಹಿಂದೆ ದಿಲೀಪ್ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ವಲಯ ಎಡಿಸಿಪಿ ಮನಿಶ್ ಅವರು ತನಿಖೆ ಕೈಗೊಂಡಿದ್ದು, ಕುಟುಂಬಸ್ಥರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k