Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಂಗಳೂರಿನಲ್ಲಿ ಬೀದಿ ವ್ಯಾಪಾರಕ್ಕೆ ಅನುಮತಿ ಇಲ್ಲ, ಹಳೇ ವಾಹನ ನಿಂತರೆ ಟೋಯಿಂಗ್‌: ಡಿಕೆಶಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಂಗಳೂರಿನಲ್ಲಿ ಬೀದಿ ವ್ಯಾಪಾರಕ್ಕೆ ಅನುಮತಿ ಇಲ್ಲ, ಹಳೇ ವಾಹನ ನಿಂತರೆ ಟೋಯಿಂಗ್‌: ಡಿಕೆಶಿ

Bengaluru City

ಬೆಂಗಳೂರಿನಲ್ಲಿ ಬೀದಿ ವ್ಯಾಪಾರಕ್ಕೆ ಅನುಮತಿ ಇಲ್ಲ, ಹಳೇ ವಾಹನ ನಿಂತರೆ ಟೋಯಿಂಗ್‌: ಡಿಕೆಶಿ

Public TV
Last updated: March 20, 2026 8:10 pm
Public TV
Share
3 Min Read
DK Shivakumar GBA Meeting MLAs Bengaluru 2
SHARE

– ಗುರುತಿನ ಚೀಟಿ ಇದ್ದವರಿಗೆ ಮಾತ್ರ ವ್ಯಾಪಾರಕ್ಕೆ ಅನುಮತಿ
– ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50 ಸಾವಿರದಿಂದ 1 ಲಕ್ಷ ದಂಡ
– ವಾರಾನುಗಟ್ಟಲೆ ರಸ್ತೆಯಲ್ಲಿ ನಿಲ್ಲಿಸಲಾದ ಹಳೆ ವಾಹನ ಡಂಪ್

ಬೆಂಗಳೂರು: ವಾರಾನುಗಟ್ಟಲೆ ರಸ್ತೆಯಲ್ಲಿ ನಿಲ್ಲಿಸಲಾದ ಹಳೆ ವಾಹನಗಳನ್ನು (Old Vehicle) ಡಂಪ್ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ವಿಧಾನಸೌಧದಲ್ಲಿ ಜಿಬಿಎ (GBA) ಪಾಲಿಕೆಗಳ ಬಜೆಟ್ ಸಿದ್ಧತೆ ಹಾಗೂ ಜಿಬಿಎ ಕಾರ್ಯಕಾರಿ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಇಂದು ಜಿಬಿಎ ವ್ಯಾಪ್ತಿಯ ಎಲ್ಲಾ ಶಾಸಕರನ್ನು ಕರೆದು ಪಾಲಿಕೆಗಳ ಬಜೆಟ್ ಕುರಿತು ಸಭೆ ನಡೆಸಲಾಯಿತು. ಇದರ ಜತೆಗೆ ಕೆಲವು ಪ್ರಮುಖ ನಿರ್ಣಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜಿಬಿಎ ಕಾರ್ಯಕಾರಿ ಸಭೆಯನ್ನು ನಡೆಸಲಾಗಿದೆ. ಪೊಲೀಸ್, ಬೆಸ್ಕಾಂ, ಬಿಎಂಆರ್ ಸಿಎಲ್, ಬಿಡಬ್ಲ್ಯೂಎಸ್ಎಸ್ ಬಿ, ಬಿಡಿಎ ಅಧಿಕಾರಿಗಳು, ಸಚಿವರು, ಶಾಸಕರು, ಸಚಿವರು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.

ಹಳೆ ವಾಹನಗಳನ್ನು ವಾರಾನುಗಟ್ಟಲೆ ರಸ್ತೆಗಳಲ್ಲಿ ನಿಲ್ಲಿಸಿ ಹೋಗಿದ್ದಾರೆ, ಅವುಗಳನ್ನು ಎತ್ತಿಕೊಂಡು ಹೋಗಿ ನಿಗದಿತ ಜಾಗದಲ್ಲಿ ಹಾಕಲಾಗುವುದು. ಇದರ ಜವಾಬ್ದಾರಿಯನ್ನು ಪೊಲೀಸರಿಗೆ ನೀಡಲಾಗಿದೆ. ಬೆಲ್ಲಳ್ಳಿ, ಬಿಡಗಾನಹಳ್ಳಿ, ಬಿದ್ದನಳ್ಳಿ, ಸೊಂಡೆಕೊಪ್ಪ ಜಾಗ ನಿಗದಿ ಮಾಡಲಾಗಿದ್ದು, ಇನ್ನು ಕೆಲವು ಜಾಗ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ವಾಹನಗಳ ಟೋಯಿಂಗ್(Towing) ಮಾಡುವ ವಿಚಾರ ಪ್ರಸ್ತಾಪ ಆಗಿದೆಯೇ ಎಂದು ಕೇಳಿದಾಗ, ಎಲ್ಲಾ ಪಾಲಿಕೆಗಳಿಗೆ 2 ವಾಹನ ನೀಡಿದ್ದೇವೆ. ಎಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲವೋ, ಅಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಲಾಗುವುದು ಎಂದರು.

ಪ್ರತಿ ವಾರ್ಡಿಗೆ 5-10 ಕೋಟಿ ರೂ. ಅನುದಾನ ಕೇಳುತ್ತಿದ್ದು, ಎಷ್ಟು ನೀಡಲಾಗುವುದು ಎಂದಾಗ, “ನೋಡೋಣ, ಅವರು ಆಕಾಶವನ್ನು ಕೇಳುತ್ತಿದ್ದಾರೆ, ಭೂಮಿಯನ್ನು ಕೇಳುತ್ತಿದ್ದಾರೆ” ಎಂದು ತಿಳಿಸಿದರು.  ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಬೆದರಿಕೆ ಆರೋಪ – ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

DK Shivakumar GBA Meeting MLAs Bengaluru 1

ಬೀದಿ ವ್ಯಾಪಾರಕ್ಕೆ ಅನುಮತಿ ಇಲ್ಲ:
ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದ್ದು, ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಐದೂ ಪಾಲಿಕೆಗಳು ತಮ್ಮದೇ ಆದ ಪ್ರತ್ಯೇಕ ಬಜೆಟ್ ತಯಾರಿಸಿಕೊಂಡಿದ್ದಾರೆ. ಶಾಸಕರುಗಳು ಕೂಡ ತಮ್ಮ ಮನವಿ ಸಲ್ಲಿಸಿದ್ದಾರೆ. ವಾರ್ಡ್ ವಾರು ಅನುದಾನ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ತರಲು ತೀರ್ಮಾನಿಸಿದ್ದೇವೆ. ನಾಗರೀಕರು ಪಾದಚಾರಿ ಮಾರ್ಗದಲ್ಲಿ ಸಾಗಲು ಪರದಾಡುತ್ತಿದ್ದು, ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದು, ಅವರಿಗೆ ಪ್ರತ್ಯೇಕ ಜಾಗ ಕಲ್ಪಿಸಿ, ಜನರಿಗೆ ಪಾದಚಾರಿ ಮಾರ್ಗದಲ್ಲಿ ಓಡಾಡಲು ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನಿಸಲಾಗಿದೆ. ಬೀದಿ ವ್ಯಾಪಾರಿಗಳ ವ್ಯಾಪಾರಕ್ಕೆ ನಿರ್ದಿಷ್ಟ ರಸ್ತೆಗಳನ್ನು ನಿಗದಿ ಮಾಡಬೇಕು. ಇದಕ್ಕೆ ಎಲ್ಲಾ ಶಾಸಕರು ಒಮ್ಮತದ ಅಭಿಪ್ರಾಯ ತಿಳಿಸಿದ್ದಾರೆ ಎಂದರು.

ಹಗಲು ವೇಳೆ ವ್ಯಾಪಾರ ಮಾಡಿ ರಾತ್ರಿ ವೇಳೆ ಗಾಡಿಯನ್ನು ಬೀದಿ ಬದಿಯಲ್ಲಿ ಕಟ್ಟಿ ಹೋಗಿದ್ದರೆ, ಅಧಿಕಾರಿಗಳು ಎಲ್ಲವನ್ನು ಪ್ಯಾಕ್ ಮಾಡಿಕೊಂಡು ಹೋಗಲಿದ್ದಾರೆ. ಈಗಲೇ ಈ ವಿಚಾರದಲ್ಲಿ ಜನರು ಜಾಗೃತರಾಗಬೇಕು ಎಂದು ಹೇಳಿದರು.

60 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, 30 ಸಾವಿರ ಮಂದಿ ನಮಗೆ ವಾಹನ ಬೇಕು ಎಂದು ಕೇಳಿದ್ದಾರೆ. ಅದಕ್ಕೆ ಟೆಂಡರ್ ಕರೆಯಲಾಗಿದೆ. ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ ಇದ್ದವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಯಾರು ಗುರುತಿನ ಚೀಟಿ ಹೊಂದಿಲ್ಲ, ಅಂತಹವರಿಗೆ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿದರು.

 

ಅನಧಿಕೃತ ಪ್ರತಿ ಫ್ಲೆಕ್ಸ್‌ಗೆ ದಂಡ:
ಇನ್ನು ನಾವು ಎಷ್ಟೇ ಹೇಳಿದರೂ ಫ್ಲೆಕ್ಸ್ ಹಾಕುವುದು ಹೆಚ್ಚುತ್ತಿದೆ. ನಮ್ಮ ಪಕ್ಷವೂ ಸೇರಿದಂತೆ ಎಲ್ಲಾ ಪಕ್ಷದವರು ಫ್ಲೆಕ್ಸ್ ಹಾಕುತ್ತಿದ್ದಾರೆ. ಇನ್ನು ಮುಂದೆ ಯಾರು ಅನಧಿಕೃತ ಫ್ಲೆಕ್ಸ್ ಹಾಕುತ್ತಾರೋ ಅವರಿಗೆ ಪ್ರತಿ ಫ್ಲೆಕ್ಸ್ ಗೆ ಅದನ್ನು ಹಾಕಿದವರಿಗೆ 50 ಸಾವಿರದಿಂದ ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಲು ಸೂಚಿಸಿದ್ದೇವೆ ಎಂದರು.

ಹುಟ್ಟುಹಬ್ಬ, ಶುಭಾಶಯ ಸೇರಿದಂತೆ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ. ಸರ್ಕಾರದಿಂದ ಜಾಹೀರಾತು ಪ್ರಕಟಿಸಲು ಕೆಲವು ಜಾಗ ನಿಗದಿ ಮಾಡಿದ್ದು, ಅಲ್ಲಿ ಅನುಮತಿ ಪಡೆದು ಹಾಕಿಕೊಳ್ಳಲಿ. ಇದರ ಹೊರತಾಗಿ ಫ್ಲೆಕ್ಸ್ ಹಾಕಿದರೆ ನಂತರದ ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ. ಈ ವಿಚಾರವಾಗಿ ಪೊಲೀಸ್ ಹಾಗೂ ಪಾಲಿಕೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದರು.

ಇನ್ನು ಪಾಲಿಕೆ ವ್ಯಾಪ್ತಿಯ ಪಾರ್ಕ್ ಗಳನ್ನು ಸ್ಥಳೀಯ ಶಾಸಕರ ಜೊತೆ ಚರ್ಚೆ ಮಾಡಿ ಯಾವ ಸಮಯದಲ್ಲಿ ತೆಗೆಯಬೇಕು, ಯಾವ ಸಮಯದಲ್ಲಿ ತೆಗೆಯಬಾರದು ಎಂದು ತೀರ್ಮಾನ ಮಾಡಬೇಕು ಎಂದರು.

TAGGED:bengalurucongressDK ShivakumarGBAಕರ್ನಾಟಕಕಾಂಗ್ರೆಸ್ಟೋಯಿಂಗ್ಡಿಕೆ ಶಿವಕುಮಾರ್ಬೆಂಗಳೂರು
Share This Article
Facebook Whatsapp Whatsapp Telegram

Cinema news

high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema

You Might Also Like

Vaibhav Sooryavanshi
Cricket

ಗುವಾಹಟಿಯಲ್ಲಿ ಸರಿಸಾಟಿಯಿಲ್ಲದ ವೈಭವ್‌ ಪ್ರದರ್ಶನ – ಆರ್‌ಸಿಬಿ ʻಜೋಶ್‌ʼಗೆ ಸೋಲಿನ ಪೆಟ್ಟು, ರಾಜಸ್ಥಾನ್‌ಗೆ 6 ವಿಕೆಟ್‌ ಜಯ

Public TV
By Public TV
29 minutes ago
Bidar Eshwar Khandre
Bidar

ಬೀದರ್‌ನ ವಿವಿಧ ಮಠಗಳಿಗೆ ಸರ್ಕಾರದ ದೇಣಿಗೆ ವಿತರಿಸಿದ ಈಶ್ವರ್‌ ಖಂಡ್ರೆ‌‌

Public TV
By Public TV
2 hours ago
Dharwad 1
Dharwad

ಧಾರವಾಡ | ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಕೊಲೆ

Public TV
By Public TV
2 hours ago
Donald Trump Angry
Latest

ಮದ್ದುಗುಂಡುಗಳನ್ನ ಯುದ್ಧನೌಕೆಗೆ ತುಂಬಿಸ್ತಿದ್ದೇವೆ – ಮಾತುಕತೆಗೆ ಒಪ್ಪದಿದ್ರೆ ಇರಾನ್‌ ಮೇಲೆ ಭೀಕರ ದಾಳಿ: ಟ್ರಂಪ್‌ ಕೊನೇ ವಾರ್ನಿಂಗ್‌

Public TV
By Public TV
2 hours ago
Artemis 2 Crew
Latest

5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ ಭೂಮಿಗೆ

Public TV
By Public TV
3 hours ago
andhra girl death
Latest

ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಮೂವರು ಸಾವು – ಕ್ಯಾಮೆರಾ ಮುಂದೆಯೇ ಪ್ರಾಣಬಿಟ್ಟ ಯುವತಿಯರು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?