ಸ್ಟ್ರೀಟ್ ಸ್ಟೈಲ್ ವೆಜ್ ಫ್ರಾಂಕಿ ತಿಂದು ನೋಡಿ

Public TV
3 Min Read
Veg Frankie Roll 3

ನೆಯಲ್ಲಿ ಮಾಡುವ ಆಹಾರಗಳಿಗಿಂತಲೂ ಬೀದಿ ಬದಿಯ ಆಹಾರಗಳು ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಅದರಲ್ಲೂ ಬೆಂಗಳೂರು, ಮುಂಬೈ ಮುಂತಾದ ಟಾಪ್ ಸಿಟಿಗಳಲ್ಲಿ ಬೀದಿಬದಿಯ ಆಹಾರ ತಿನ್ನುವವರೇ ಹೆಚ್ಚು. ಇವತ್ತಿನ ನಮ್ಮ ರೆಸಿಪಿಯಲ್ಲಿ ಬಾಂಬೆ ಸ್ಟೈಲ್‌ನ ವೆಜ್ ಫ್ರಾಂಕಿ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಚಹಾದೊಂದಿಗೆ ಮಜವೆನಿಸುತ್ತದೆ ಬೆಂಡೆಕಾಯಿಯ ಕುರುಕಲು ತಿಂಡಿ

Veg Frankie Roll 2

ಬೇಕಾಗುವ ಸಾಮಗ್ರಿಗಳು:
ಅಚ್ಚ ಖಾರದ ಪುಡಿ – 1 ಚಮಚ
ಧನಿಯಾ ಪುಡಿ -1 ಚಮಚ
ಜೀರಿಗೆ ಪುಡಿ – 1 ಚಮಚ
ಆಮ್‌ಚೂರ್ ಪೌಡರ್ – ಒಂದೂವರೆ ಚಮಚ
ಗರಂ ಮಸಾಲ – 1 ಚಮಚ
ಬ್ಲ್ಯಾಕ್ ಸಾಲ್ಟ್ – ಅರ್ಧ ಚಮಚ
ಅರಶಿಣ – ಅರ್ಧ ಚಮಚ
ಮೈದಾ – ಅರ್ಧ ಕಪ್
ಗೋಧಿ ಹಿಟ್ಟು – ಅರ್ಧ ಕಪ್
ಉಪ್ಪು – 1 ಚಮಚ
ಎಣ್ಣೆ – 1 ಚಮಚ
ನೀರು – ಅರ್ಧ ಕಪ್
ವಿನೇಗರ್ – 2 ಚಮಚ
ಹೆಚ್ಚಿದ ಹಸಿರು ಮೆಣಸು – 1 ಚಮಚ
ಹೆಚ್ಚಿದ ಈರುಳ್ಳಿ – 2 ಕಪ್
ಕ್ಯಾಪ್ಸಿಕಮ್ – ಅರ್ಧ ಕಪ್
ಬೆಣ್ಣೆ – 1 ಚಮಚ
ಹೆಚ್ಚಿದ ಬೆಳ್ಳುಳ್ಳಿ – 1 ಚಮಚ
ಹೆಚ್ಚಿದ ಶುಂಠಿ – 1 ಚಮಚ
ಬೇಯಿಸಿದ ಅಲೂಗೆಡ್ಡೆ – 2
ಮಯೋನೀಸ್ – 2 ಚಮಚ

VEG FRANKIE ROLL

ಮಾಡುವ ವಿಧಾನ:
* ಮೊದಲಿಗೆ ಫ್ರಾಂಕಿ ಮಸಾಲ ಮಾಡಲು ಒಂದು ಬೌಲಿಗೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಆಮ್‌ಚೂರ್ ಪೌಡರ್, ಗರಂ ಮಸಾಲ, ಬ್ಲ್ಯಾಕ್ ಸಾಲ್ಟ್, ಅರಶಿಣ ಹಾಕಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಗಾಳಿಯಾಡದಂತೆ ಮುಚ್ಚಿಟ್ಟರೆ ಇನ್ನೊಂದು ಬಾರಿಗೆ ಉಪಯೋಗಿಸಿಕೊಳ್ಳಬಹುದು.
* ಈಗ ಇನ್ನೊಂದು ದೊಡ್ಡ ಬೌಲ್‌ನಲ್ಲಿ ಮೈದಾ ಹಿಟ್ಟು, ಗೋಧಿ ಹಿಟ್ಟು, ಉಪ್ಪು, ಎಣ್ಣೆಯನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ನೀರನ್ನು ಸೇರಿಸಿಕೊಂಡು ಚನ್ನಾಗಿ ಕಲಸಿಕೊಳ್ಳಿ. ನೀರು ಬೇಕೆನಿಸದರೆ ಮತ್ತೆ ಸ್ವಲ್ಪ ನೀರನ್ನು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
* ಈಗ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ 30 ನಿಮಿಷಗಳ ಕಾಲ ಮುಚ್ಚಿಡಿ.
* ಈಗ ಒಂದು ಚಿಕ್ಕ ಬೌಲ್‌ಗೆ 2 ಚಮಚ ವಿನೇಗರ್ ಹಾಕಿಕೊಂಡು ಅದಕ್ಕೆ ಹೆಚ್ಚಿದ ಹಸಿರು ಮೆಣಸನ್ನು ಸೇರಿಸಿಕೊಂಡು ಸ್ವಲ್ಪ ಉಪ್ಪನ್ನು ಹಾಕಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ.
* ನಂತರ ಮುಚ್ಚಿಟ್ಟಿದ್ದ ಚಪಾತಿ ಹಿಟ್ಟನ್ನು ಮತ್ತೊಂದು ಬಾರಿ ಕಲಸಿಕೊಂಡು ಉಂಡೆಗಳನ್ನಾಗಿ ಮಾಡಿಕೊಳ್ಳಿ. ಬಳಿಕ ಅದನ್ನು ಚಪಾತಿ ರೀತಿಯಲ್ಲಿ ಲಟ್ಟಿಸಿಕೊಳ್ಳಿ.
* ಬಳಿಕ ಒಂದು ತವಾದಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ತವಾ ಬಿಸಿಯಾದ ಬಳಿಕ ಚಪಾತಿಗಳನ್ನು ಎರಡೂ ಬದಿ ಬೇಯಿಸಿಕೊಳ್ಳಿ. ಈ ರೀತಿ ಎಲ್ಲಾ ಚಪಾತಿಗಳನ್ನು ಮಾಡಿ ಬದಿಗಿಟ್ಟುಕೊಳ್ಳಿ.
* ಈಗ ಅದೇ ತವಾದ ಮೇಲೆ ಈರುಳ್ಳಿ, ಕ್ಯಾಪ್ಸಿಕಮ್ ಹಾಕಿ ಚನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಚಿಟಿಕೆ ಉಪ್ಪನ್ನು ಸೇರಿಸಿಕೊಂಡು ತಿರುವಿಕೊಂಡು ಒಂದು ಪ್ಲೇಟ್‌ಗೆ ಹಾಕಿ ಬದಿಗಿಡಿ.
* ಈಗ ಮತ್ತೆ ತವಾದ ಮೇಲೆ ಬೆಣ್ಣೆ ಹಾಕಿಕೊಂಡು ಅದರ ನೀರಾದ ಬಳಿಕ ಅದಕ್ಕೆ ಸ್ವಲ್ಪ ಹೆಚ್ಚಿದ ಹಸಿರು ಮೆಣಸನ್ನು ಹಾಕಿಕೊಂಡು, ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
* ನಂತರ ಅದಕ್ಕೆ ಒಂದು ಕಪ್ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಂಡು ತಿರುವಿಕೊಳ್ಳಿ.
* ಈಗ ಅದಕ್ಕೆ ಒಂದೂವರೆ ಚಮಚ ಫ್ರಾಂಕಿ ಮಸಾಲೆ ಪೌಡರ್ ಅನ್ನು ಹಾಕಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಿ. ಬಳಿಕ ಸ್ವಲ್ಪ ಉಪ್ಪು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿ ಕಿವುಚಿಕೊಂಡ ಆಲೂಗೆಡ್ಡೆಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ಚಿಕ್ಕ ಚಿಕ್ಕ ಉದ್ದನೆಯ ಉಂಡೆಗಳನ್ನಾಗಿ ಮಾಡಿ.
* ಬಳಿಕ ಚಪಾತಿಗೆ ಸ್ವಲ್ಪ ಪುದಿನಾ ಚಟ್ನಿಯನ್ನು ಸವರಿಕೊಂಡು ಅದರ ಮೇಲೆ ಆಲೂಗೆಡ್ಡೆ ಮಿಶ್ರಣವನ್ನು ಇಟ್ಟುಕೊಂಡು ಅದಕ್ಕೆ ಕ್ಯಾಪ್ಸಿಕಮ್ ಮತ್ತು ಈರುಳ್ಳಿ ಮಿಶ್ರಣವನ್ನು ಹಾಕಿಕೊಳ್ಳಿ. ಬಳಿಕ ಇದರ ಮೇಲೆ ಸ್ವಲ್ಪ ಮಯೋನೀಸ್ ಸವರಿಕೊಂಡು ಅದಕ್ಕೆ ವಿನೇಗರ್ ಮತ್ತು ಹಸಿರು ಮೆಣಸು ಮಿಶ್ರಣವನ್ನು ಹಾಕಿಕೊಂಡು ರೋಲ್ ಮಾಡಿ.
* ವೆಜ್ ಫ್ರಾಂಕಿ ರೋಲ್ ತಿನ್ನಲು ರೆಡಿ. ಇದನ್ನೂ ಓದಿ: ಮತ್ತೆ ಮತ್ತೆ ತಿನ್ನಬೇಕು ಎನಿಸುವ ಎಳ್ಳು ಚಿಕ್ಕಿ

Web Stories

Share This Article