ದಿನ ಸಂಜೆಯಾದರೆ ಏನಾದರೂ ಸ್ನ್ಯಾಕ್ಸ್ ಅಥವಾ ಏನನ್ನಾದರು ತಿನ್ನುವ ರೂಢಿ ಎಲ್ಲರಿಗೂ ಇದ್ದೇ ಇರುತ್ತದೆ. ಹೆಚ್ಚಾಗಿ ಸ್ಟ್ರೀಟ್ ಸ್ಟೈಲ್ ತಿನಿಸುಗಳು ಎಲ್ಲರನ್ನು ಆಕರ್ಷಿಸುತ್ತದೆ. ಅದರಲ್ಲೂ ಮೋಮೋಸ್ (Momos) ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ. ನಾನ್‌ವೆಜ್ ಮತ್ತು ವೆಜ್. ಇವತ್ತು ನಾವು ಸ್ಟ್ರೀಟ್ ಸ್ಟೈಲ್ ವೆಜ್ ಮೋಮೋಸ್ ಅನ್ನು ಯಾವ ರೀತಿಯಾಗಿ ಮಾಡುವುದು ಎಂದು ತಿಳಿಸಿಕೊಡುತ್ತಿದ್ದೇವೆ.
ಬೇಕಾಗುವ ಸಾಮಾಗ್ರಿಗಳು:
Advertisement
ಮೈದಾಹಿಟ್ಟು- 1ಕಪ್
ತುರಿದ ಕ್ಯಾರೆಟ್- 1
ತುರಿದ ಎಲೆಕೋಸು- 1ಕಪ್
ಸಣ್ಣದಾಗಿ ಹೆಚ್ಚಿದ ಈರುಳ್ಳಿ- 1
ತುರಿದ ಶುಂಠಿ- ಅರ್ಧ ಚಮಚ
ಹೆಚ್ಚಿದ ದೊಣ್ಣೆಮೆಣಸು- ಅರ್ಧ ಕಪ್
ಮೆಣಸಿನ ಪುಡಿ (ಪೆಪ್ಪರ್)- ಅರ್ಧ ಚಮಚ
ಹೆಚ್ಚಿದ ಕೊತ್ತಂಬರಿಸೊಪ್ಪು- ಸ್ವಲ್ಪ
ಹೆಚ್ಚಿದ ಹಸಿರು ಮೆಣಸಿನಕಾಯಿ- 1
ಎಣ್ಣೆ- ಅಗತ್ಯಕ್ಕೆ ತಕ್ಕಂತೆ
ಉಪ್ಪು- ರುಚಿಗೆ ತಕ್ಕಷ್ಟು ಇದನ್ನೂ ಓದಿ: ಒಂದೊಳ್ಳೆ ಸ್ನ್ಯಾಕ್ಸ್ ರೆಸಿಪಿ – ಗೋಧಿ ಉಸ್ಲಿ
Advertisement
Advertisement
ಮಾಡುವ ವಿಧಾನ:
Advertisement
- ಮೊದಲಿಗೆ ಒಂದು ಬೌಲ್‌ಗೆ ಮೈದಾಹಿಟ್ಟನ್ನು ಮತ್ತು ಉಪ್ಪು ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪನೇ ನೀರನ್ನು ಹಾಕಿಕೊಂಡು ಮೃದುವಾಗಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದನ್ನು 5 ನಿಮಿಷಗಳವರೆಗೆ ಪಕ್ಕಕ್ಕೆ ಇಟ್ಟುಕೊಳ್ಳಿ.
- ನಂತರ ಒಂದು ಬೌಲ್ ಮೇಲೆ ಒಂದು ಬಟ್ಟೆಯನ್ನು ಹರಡಿಕೊಳ್ಳಿ. ಇದಕ್ಕೆ ಹೆಚ್ಚಿಟ್ಟುಕೊಂಡ ತರಕಾರಿ ಹಾಗೂ ಶುಂಠಿಯನ್ನು ಹಾಕಿಕೊಳ್ಳಬೇಕು. ಬಳಿಕ ಇದನ್ನು ಗಂಟುಕಟ್ಟಿಕೊಂಡು ನೀರಿನಾಂಶ ಹೋಗುವವರೆಗೂ ಚನ್ನಾಗಿ ಹಿಂಡಿಕೊಳ್ಳಿ. ನಂತರ ಇದಕ್ಕೆ ಮೆಣಸಿನ ಪುಡಿ ಹಾಕಿಕೊಂಡು ಒಂದುಸಲ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಬೇಕು.
- ನಂತರ ಕಲಸಿಕೊಂಡಿದ್ದ ಹಿಟ್ಟಿನಿಂದ ಚಿಕ್ಕದಾದ ಉಂಡೆಗಳನ್ನು ಮಾಡಿಕೊಳ್ಳಬೇಕು. ನಂತರ ಈ ಉಂಡೆಗಳನ್ನು ಹದವಾಗಿ ಪೂರಿಗೆ ಯಾವ ರೀತಿಯಾಗಿ ಲಟ್ಟಿಸಿಕೊಳ್ಳುತ್ತೇವೋ ಆ ರೀತಿಯಾಗಿ ಲಟ್ಟಿಸಿಕೊಳ್ಳಬೇಕು. ಇದಕ್ಕೆ ಒಂದು ಚಮಚವಾಗುವಷ್ಟು ಮಿಶ್ರಣವನ್ನು ಹಾಕಿಕೊಳ್ಳಿ. ನಂತರ ಇದನ್ನು ಮೋದಕ ರೀತಿಯಲ್ಲಿ ಸ್ಟಫಿಂಗ್ ಮಾಡಿಕೊಳ್ಳಬೇಕು. ಇದೇ ರೀತಿಯಾಗಿ ಎಲ್ಲವನ್ನೂ ಮಾಡಿಟ್ಟುಕೊಳ್ಳಿ.
- ಇಡ್ಲಿ ಪಾತ್ರೆಯಲ್ಲಿ ನೀರು ಬಿಸಿಯಾಗಲು ಇಟ್ಟು ಇಡ್ಲಿ ಪ್ಲೇಟ್‌ಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಳ್ಳಿ. ನಂತರ ಸ್ಟಫಿಂಗ್ ಮಾಡಿದ್ದ ಮೋಮೋಸ್‌ಗಳೆಲ್ಲವನ್ನು ಬೇಯಿಸಿಕೊಳ್ಳಿ. ಗ್ಯಾಸ್ ಅನ್ನು ಹದವಾಗಿಟ್ಟುಕೊಂಡು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
- ನಂತರ ಇದನ್ನು ಒಂದು ಪ್ಲೇಟ್‌ಗೆ ಸರ್ವ್ ಮಾಡಿಕೊಂಡು ಸವಿಯಿರಿ. ಮಯೋನಿಸ್ ಹಾಗೂ ಟೊಮೆಟೊ ಕೆಚಪ್ ಮೋಮೋಸ್‌ಗೆ ಅದ್ಭುತ ಕಾಂಬಿನೇಷನ್. ಇದನ್ನೂ ಓದಿ: 15 ನಿಮಿಷ ಸಾಕು – ಟ್ರೈ ಮಾಡಿ ಬಾಳೆಹಣ್ಣು, ಓಟ್ಸ್ ಕುಕ್ಕೀಸ್