ಯಾದಗಿರಿ: ಜಿಲ್ಲಾ ಕ್ರೀಡಾ ಕಚೇರಿಯಲ್ಲಿ ಬೀದಿ ನಾಯಿಗಳದ್ದೇ (Street Dogs) ದರ್ಬಾರ್ ಎನ್ನುವಂತಾಗಿದೆ.
ಯುವ ಜನ ಮತ್ತು ಕ್ರೀಡಾ ಕಚೇರಿ ಕೊಠಡಿಯಲ್ಲೇ ಬೀದಿ ನಾಯಿಗಳು ಗಡದ್ದಾಗಿ ನಿದ್ದೆ ಮಾಡುತ್ತಿವೆ. ಕ್ರೀಡಾಧಿಕಾರಿ ಕೊಠಡಿಯ ಪ್ರಾಂಗಣದಲ್ಲೇ ಬೀದಿ ನಾಯಿಗಳ ಆಟಾಟೋಪ ಜೋರಾಗಿದೆ. ಕ್ರೀಡಾ ಕಚೇರಿಯಲ್ಲಿ ಡಿ ಗ್ರೂಪ್ ಸಿಬ್ಬಂದಿ ಇದ್ರೂ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿಯೇ ಕ್ರೀಡಾ ಕಚೇರಿ ಇದೆ. ಕ್ರೀಡಾ ಕಚೇರಿಯಲ್ಲಿ ನಾಯಿಗಳು ವಾಸವಿದ್ರೂ ನಾಯಿ ಓಡಿಸದೇ ನಿರ್ಲಕ್ಷ್ಯ ಮಾಡ್ತಿರೋದ್ರಿಂದ, ಕ್ರೀಡಾ ಕಚೇರಿಗೆ ಬರುವ ಕ್ರೀಡಾಪಟುಗಳಿಗೆ ಬೀದಿ ನಾಯಿಗಳ ಭಯ ಶುರುವಾಗಿದೆ. ಇದನ್ನೂ ಓದಿ: ಸಂಪುಟ ಪುನಾರಚನೆ ಇಲ್ಲ, ಕರ್ನಾಟಕದಿಂದ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ: ಸಿಎಂ