ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಾಗೂ ರಾಜ್‍ಕುಮಾರ್ ಅಭಿನಯದ ಸ್ತ್ರೀ ಸಿನಿಮಾ ಇದೀಗ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು ಎರಡೇ ವಾರದಲ್ಲಿ 82.29 ಕೋಟಿ ರೂ. ಹಣ ಸಂಗ್ರಹಿಸಿದೆ.
ಎರಡು ವಾರದಲ್ಲಿ ಒಟ್ಟು 82.08 ಕೋಟಿ ರೂ. ಹಣ ಕಲೆಕ್ಷನ್ ಮಾಡಿದ್ದು, ನೂರು ಕೋಟಿ ಕಲೆಕ್ಷನ್‍ನತ್ತ ದಾಪುಗಾಲು ಇಡುತ್ತಿದೆ ಎಂದು ಚಲನ ಚಿತ್ರ ಮಾರುಕಟ್ಟೆ ವಿಶ್ಲೇಷಕ ತರುಣ್ ಅದರ್ಶ್ ಟ್ವೀಟ್ ಮಾಡಿದ್ದಾರೆ.
There’s no stopping this one… #Stree continues its DREAM RUN… Overpowers all new *Hindi* releases by a huge margin… En route to ₹ 100 cr Club… [Week 2] Fri 4.39 cr, Sat 7.63 cr, Sun 9.88 cr. Total: ₹ 82.29 cr. India biz.
— taran adarsh (@taran_adarsh) September 10, 2018
#Stree Weekend 1 versus Weekend 2…
Weekend 1: ₹ 32.27 cr
Weekend 2: ₹ 21.90 cr
Decline in *Weekend 2*: 32.14%… Clearly, the glowing word of mouth has propelled the film to massive numbers at the ticket window.
India biz.
— taran adarsh (@taran_adarsh) September 10, 2018
#Stree biz at a glance…
Week 1: ₹ 60.39 cr
Weekend 2: ₹ 21.90 cr
Total: ₹ 82.29 cr
India biz.
SUPER HIT… Heading towards BLOCKBUSTER status.
— taran adarsh (@taran_adarsh) September 10, 2018
ಮೊದಲ ವಾರದಲ್ಲಿ ಒಟ್ಟು 60.39 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸ್ತ್ರೀ ಎರಡನೇ ವಾರಾಂತ್ಯದಲ್ಲಿ ಒಟ್ಟು 21.90 ಕೋಟಿ ರೂ. ಶುಕ್ರವಾರ 4.39 ಕೋಟಿ ರೂ. ಶನಿವಾರ 7.63 ಕೋಟಿ ರೂ. ಮತ್ತು ಭಾನುವಾರ 9.88 ಕೋಟಿ ರೂ. ಒಟ್ಟು 82.29 ಕೋಟಿ ರೂ. ಪಡೆದು 100 ಕೋಟಿ ರೂ. ನತ್ತ ಹೆಜ್ಜೆ ಇಡುತ್ತಿದೆ.
ಸ್ತ್ರೀ ಹಾರರ್ ಸಿನಿಮಾವಾಗಿದ್ದು, ಕಾಮಿಡಿಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ರಾಜ್‍ಕುಮಾರ್ ರಾವ್, ಶ್ರದ್ಧಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಪಂಕಜ್ ತ್ರಿಪಾಠಿ, ಅಪಾರಶಕ್ತಿ ಖುರಾನ ಮತ್ತು ಅಭಿಷೇಕ್ ಬ್ಯಾನರ್ಜಿ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ನಗರ ಪ್ರದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ನಾಳೆ ಬಾ (ದೆವ್ವ, ಭೂತ ಮನೆಯೊಳಗೆ ಪ್ರವೇಶಿಸುವುದನ್ನು ತಟ್ಟುವುದನ್ನು ಬಾಗಿಲ ಮೇಲೆ ಬರೆಯುವ) ನಂಬಿಕೆ ಕುರಿತ ಸಂಗತಿಗೆ ಈ ಚಿತ್ರದಲ್ಲಿ ಕಾಮಿಡಿ ಸ್ಪರ್ಶ ನೀಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv