ಯಶ್ (Yash) ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. 7.8 ಅಡಿ ಎತ್ತರದ ನಟ ಸುನೀಲ್ ಕುಮಾರ್ ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ರಾಕಿ ಬಾಯ್‌ಗಾಗಿ ಮತ್ತೊಮ್ಮೆ ಕನ್ನಡಕ್ಕೆ ಬರಲಿದ್ದಾರೆ. ಇದನ್ನೂ ಓದಿ:ಬೆಂಗಳೂರು ಹೋಟೆಲ್‌ನಲ್ಲಿ ನಟನಿಗೆ ನಿರ್ಮಾಪಕ ರಂಜಿತ್ ಲೈಂಗಿಕ ಕಿರುಕುಳ- ದೂರು ದಾಖಲು
‘ದಿ ಗ್ರೇಟ್ ಕಲಿ ಆಫ್ ಜಮ್ಮು’ ಅಂತ ಕರೆಸಿಕೊಳ್ಳುವ ಸುನೀಲ್ ಕುಮಾರ್ ಅವರು ಯಶ್ ಸಿನಿಮಾದಲ್ಲಿ ನಟಿಸುವ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಅವರೇ ರಿವೀಲ್ ಮಾಡಿದ್ದಾರೆ. ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸೋ ಬಗ್ಗೆ ಮಾತುಕತೆ ನಡೆಯುತ್ತಿದೆ ಅಂತಲೇ ಹೇಳಿಕೊಂಡಿದ್ದಾರೆ. ವಿಲನ್ ಪಾತ್ರನಾ? ಅಥವಾ ಯಾವ ಪಾತ್ರಕ್ಕಾಗಿ ಎಂಬುದನ್ನು ನಟ ರಿವೀಲ್ ಮಾಡಿಲ್ಲ.
View this post on Instagram
ಇನ್ನೂ ‘ಟಾಕ್ಸಿಕ್’ ಸಿನಿಮಾಗೂ ಮುನ್ನ ಈಗಾಗಲೇ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಚಿಕ್ಕಣ್ಣ ನಟನೆಯ ‘ಫಾರೆಸ್ಟ್’ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನೇ ಸುನೀಲ್ ಕುಮಾರ್ ಮಾಡಿದ್ದಾರೆ.
ಅಂದಹಾಗೆ, ಸುನೀಲ್ ಕುಮಾರ್ ಅವರು ‘ಸ್ತ್ರೀ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಎದುರು ಖಡಕ್ ವಿಲನ್ ಆಗಿ ನಟಿಸಿದ್ದಾರೆ. ಸರ್ಕಟ ಎಂಬ ಅವರ ಹೆಸರಿನ ಪಾತ್ರ ಫೇಮಸ್ ಆಗಿದೆ. ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಿಂದ ಅವರಿಗೆ ಆಫರ್‌ಗಳು ಅರಸಿ ಬರುತ್ತಿವೆ.